ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊರೋನಾ ಸೋಂಕಿನಿಂದ ನಿರ್ದೇಶಕ ಪ್ರದೀಪ್ ರಾಜ್(46) ಕೊನೆಯುಸಿರೆಳೆದಿದ್ದಾರೆ.
ಹಲವು ವರ್ಷದಿಂದ ಅವರು ಡಯಾಬಿಟಿಸ್‌ನಿಂದ ಬಳಲುತ್ತಿದ್ದರು. ಕೊರೋನಾ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಅವರ ಸಂಬಂಧಿಕರು ಮಾಹಿತಿ ನೀಡಿದ್ದಾರೆ.
ಕಿರಾತಕ, ರಜನಿ ಕಾಂತ, ಅಂಜದ ಗಂಡು ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ನಿರ್ದೇಶಕನ ಅಗಲಿಕೆಗೆ ಸ್ಯಾಂಡಲ್‌ವುಡ್ ಕಂಬನಿ ಮಿಡಿದಿದೆ.
ಆರು ತಿಂಗಳಿನಿಂದ ಪ್ರದೀಪ್ ಅವರ ಆರೋಗ್ಯ ಹದಗೆಟ್ಟಿತ್ತು. ಲಿವರ್ ಸಮಸ್ಯೆಯಾಗಿತ್ತು. ಇದರ ಜೊತೆಗೆ ಕೊರೋನಾ ಕೂಡ ಒಕ್ಕರಿಸಿತ್ತು. ಲಾಕ್‌ಡೌನ್ ಸಮಯದಲ್ಲೂ ಅವರು ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರಲಿಲ್ಲ ಎಂದು ಅವರ ಸಹೋದರ ಪ್ರಶಾಂತ್ ರಾಜ್ ಮಾಹಿತಿ ನೀಡಿದ್ದಾರೆ.