ಹೊಸದಿಗಂತ ಬಳ್ಳಾರಿ:
ಸಂಡೂರು ಎಸ್ಟಿ ಮೀಸಲು ಕ್ಷೇತ್ರದ ಉಪ ಚುನಾವಣೆ ಬುಧವಾರ ಬಹುತೇಕ ಶಾಂತಿಯುತವಾಗಿ ನಡೆದಿದ್ದು, ಶೇ.76.24 ರಷ್ಟು ಮತದಾನವಾಗಿದೆ.
ಕ್ಷೇತ್ರದಲ್ಲಿ ಒಟ್ಟು 2,36,047 ಮತದಾರರಿದ್ದು, 1,17,739 ಪುರುಷರು, 1,18,289 ಮಹಿಳೆಯರು ಇದ್ದು, ಇದರಲ್ಲಿ 89,252 ಮಹಿಳೆಯರು, 90,922 ಪುರುಷರು ಹಾಗೂ ಇತರರು 12 ಜನರು ಸೇರಿ ಒಟ್ಟು 1,80,189 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.