ಸ್ಯಾಂಡ್‌ ವಿಚ್ ಕೇಕ್‌ ತಿಂದಿದ್ದೀರಾ..? ಒಮ್ಮೆ ಮಾಡಿ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಕೇಕ್‌ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ತಿನ್ನೋಕೆ ಇಷ್ಟ ಆದ್ರೆ ಮಾಡೋಕೆ ಕಷ್ಟ. ಹಾಗಾಗಿಯೇ ಮೂಲೆ ಮೂಲೆಗೂ ಒಂದೊಂದು ಬೇಕರಿ ತಲೆಎತ್ತಿವೆ. ನಾವು ಇವತ್ತು ಬಹಳ ಸುಲಭವಾಗಿ, ಓವೆನ್‌ ಇಲ್ಲದೆ ಸ್ಯಾಂಡ್‌ ವಿಚ್‌ ಪ್ಲೇಟ್‌ನಲ್ಲಿ ಕೇಕ್‌ ತಯಾರಿ ಮಾಡುವುದು ಹೇಗೆ ಅಂತ ಹೇಳಿಕೊಡ್ತೀವಿ ಬನ್ನಿ…

ಬೇಕಾಗುವ ಪದಾರ್ಥಗಳು

ವೆನಿಲ್ಲಾ ಕೇಕ್ ಗಾಗಿ:
1/2 ಕಪ್ ಎಣ್ಣೆ
1 ಕಪ್ ಹಾಲು
1 ಟೀಸ್ಪೂನ್ ವಿನೆಗರ್
3/4 ಟೀಸ್ಪೂನ್ ವೆನಿಲ್ಲಾ ಸಾರ
3 ಹನಿ ಹಳದಿ ಆಹಾರ ಬಣ್ಣ
1/2 ಕಪ್ ಸಕ್ಕರೆ
1.1/2 ಕಪ್ ಮೈದಾ
3/4 ಟೀಸ್ಪೂನ್ ಬೇಕಿಂಗ್ ಪೌಡರ್
1/4 ಟೀಸ್ಪೂನ್ ಬೇಕಿಂಗ್ ಸೋಡಾ

ಚಾಕೊಲೇಟ್ ಕೇಕ್ ಗಾಗಿ:
1/2 ಕಪ್ ಎಣ್ಣೆ
1 ಕಪ್ ಹಾಲು
1 ಟೀಸ್ಪೂನ್ ವಿನೆಗರ್
3/4 ಟೀಸ್ಪೂನ್ ವೆನಿಲ್ಲಾ ಸಾರ
1/2 ಕಪ್ ಸಕ್ಕರೆ
1/4 ಕಪ್ ಕೋಕೋ ಪೌಡರ್
1.1/4 ಕಪ್ ಮೈದಾ
3/4 ಟೀಸ್ಪೂನ್ ಬೇಕಿಂಗ್ ಪೌಡರ್
1/4 ಟೀಸ್ಪೂನ್ ಬೇಕಿಂಗ್ ಸೋಡಾ

ವೆನಿಲ್ಲಾ ಕೇಕ್‌ ಮಾಡುವ ವಿಧಾನ

ಮೊದಲಿಗೆ, ಒಂದು ಬಟ್ಟಲಿನಲ್ಲಿ, 1/2 ಕಪ್ ಎಣ್ಣೆ, 1 ಕಪ್ ಹಾಲು, 1 ಟೀಸ್ಪೂನ್ ವಿನೆಗರ್,3/4ಟೀಸ್ಪೂನ್ ವೆನಿಲ್ಲಾ ಸಾರವನ್ನು ತೆಗೆದುಕೊಳ್ಳಿ.
3 ಹನಿ ಹಳದಿ ಆಹಾರ ಬಣ್ಣ ಮತ್ತು 1/2 ಕಪ್ ಸಕ್ಕರೆಯನ್ನು ಸೇರಿಸಿ.
ಎಲ್ಲವನ್ನೂ ಚೆನ್ನಾಗಿ ವಿಸ್ಕ್ ಮಾಡಿ ಅದಕ್ಕೆ 11/2 ಕಪ್ ಮೈದಾ, 3/4 ಟೀಸ್ಪೂನ್ ಬೇಕಿಂಗ್ ಪೌಡರ್ ಮತ್ತು 1/4 ಟೀಸ್ಪೂನ್ ಬೇಕಿಂಗ್ ಸೋಡಾ ಸೇರಿಸಿ. ಕಟ್ ಅಂಡ್ ಫೋಲ್ಡ್ ವಿಧಾನವನ್ನು ಬಳಸಿ ಮೃದುವಾದ ಉಂಡೆ ರಹಿತ ಹಿಟ್ಟನ್ನು ತಯಾರಿಸಿ. ಈಗ ಸ್ಯಾಂಡ್ವಿಚ್ ಮೇಕರ್ ಅನ್ನು ಎಣ್ಣೆಯಿಂದ ಗ್ರೀಸ್ ಮಾಡಿ ಕೇಕ್‌ ಬ್ಯಾಟರ್‌ ಅದರೊಳಗೆ ಹಾಕಿ 2-3ನಿಮಿಷ ಕಾಲ ಬೇಯಿಸಿದ್ರೆ ವೆನಿಲ್ಲಾ ಕೇಕ್‌ ಸಿದ್ದ.

ಚಾಕೊಲೇಟ್ ಕೇಕ್ ಗಾಗಿ:

ಒಂದು ಬಟ್ಟಲಿನಲ್ಲಿ, 1/2 ಕಪ್ ಎಣ್ಣೆ, 1 ಕಪ್ ಹಾಲು, 1 ಟೀಸ್ಪೂನ್ ವಿನೆಗರ್, 3/4 ಟೀಸ್ಪೂನ್ ವೆನಿಲ್ಲಾ ಸಾರವನ್ನು ತೆಗೆದುಕೊಳ್ಳಿ.
ಅಲ್ಲದೆ, 1/2 ಕಪ್ ಸಕ್ಕರೆ ಸೇರಿಸಿ ಎಲ್ಲವನ್ನೂ ಚೆನ್ನಾಗಿ ವಿಸ್ಕ್ ಮಾಡಿ ಈಗ 1/4 ಕಪ್ ಕೋಕೋ ಪೌಡರ್, 1 ಕಪ್ ಮೈದಾ, 1/2 ಟೀಸ್ಪೂನ್ ಬೇಕಿಂಗ್ ಪೌಡರ್ ಮತ್ತು 1/4 ಟೀಸ್ಪೂನ್ ಬೇಕಿಂಗ್ ಸೋಡಾವನ್ನು ಸೇರಿಸಿ. ಕಟ್ ಅಂಡ್ ಫೋಲ್ಡ್ ವಿಧಾನದಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಸ್ಯಾಂಡ್ವಿಚ್ ಮೇಕರ್ ಗೆ ಎಣ್ಣೆ ಸವರಿ ಕೇಕ್ ಬ್ಯಾಟರ್ ಹಾಕಿ 2-3 ನಿಮಿಷಗಳ ಕಾಲ ಅಥವಾ ಕೇಕ್ ಸಂಪೂರ್ಣವಾಗಿ ಬೇಯುವವರೆಗೆ ಗ್ರಿಲ್ ಮಾಡಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!