ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ದೇವರ ದರುಶನ ಪಡೆಯುತ್ತಿದ್ದ ವೇಳೆ ಬೆಂಕಿ ಅವಘಟ ಉಂಟಾಗಿರುವ ಘಟನೆ ಪುಣೆಯಲ್ಲಿ ನಡೆದಿದೆ. ಗಣೇಶ ಪೆಂಡಾಲ್‌ನಲ್ಲಿ ನಡೆಯುತ್ತಿದ್ದ ಆರತಿ ಕಾರ್ಯಕ್ರಮದಲ್ಲಿ ಜೆ.ಪಿ.ನಡ್ಡಾ ಭಾಗವಹಿಸಿದ ವೇಳೆ ಸಾನೆ ಗುರೂಜಿ ತರುಣ್ ಮಿತ್ರ ಮಂಡಲದ ವಿನಾಯಕ ಮಂಟಪದ ಮೇಲ್ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಕ್ರಮದಲ್ಲಿ ಜೆ.ಪಿ.ನಡ್ಡಾ ಅವರನ್ನು ಕೂಡಲೇ ಭದ್ರತಾ ಸಿಬ್ಬಂದಿ ಹೊರಕ್ಕೆ ಕರೆದೊಯ್ದಿದ್ದು, ಅನಾಹುತ ತಪ್ಪಿದೆ.
ಉಜ್ಜಯಿನಿಯ ಮಹಾಕಾಳ ದೇವಸ್ಥಾನದ ಮಾದರಿಯಲ್ಲಿ ಸಾನೆ ಗುರೂಜಿ ತರುಣ್ ಮಂಡಲ್ ವಿನ್ಯಾಸಗೊಳಿಸಿದ ಈ ಗಣಪತಿ ಪೆಂಡಾಲ್ ಮೇಲ್ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಅರ್ಧದಲ್ಲೇ ಆರತಿಯನ್ನು ಬಿಡಬೇಕಾಯಿತು.
ಪವಾಡ ಸದೃಶದಂತೆ ಮಳೆ ಸುರಿದು ಕೆಲವೇ ನಿಮಿಷಗಳಲ್ಲಿ ಬೆಂಕಿ ಆರಿದ್ದು, ಭಾರೀ ಅನಾಹುತ ತಪ್ಪಿದೆ. ಪಟಾಕಿ ಸಿಡಿತದಿಂದ ಕಿಡಿ ಹಾರಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.