ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ಬಿಗ್‌ಬಾಸ್ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಿದೆ. ಇದೀಗ ಟಾಸ್ಕ್ ಹೆಸರಿನಲ್ಲಿ ಸ್ಪರ್ಧಿಗಳಾದ ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಅವರ ಕಣ್ಣಿಗೆ ಏಟು ಬಿದ್ದಿದೆ ಎನ್ನಲಾಗುತ್ತಿದ್ದು, ಇಬ್ಬರಿಗೂ ಚಿಕಿತ್ಸೆ ಕೊಡಿಸಿ ವಾಪಸ್ ಕರೆತರಲಾಗಿದೆ. ಕಪ್ಪು ಕನ್ನಡಕವನ್ನು ಧರಿಸಿ ಇಬ್ಬರೂ ಮನೆಯೊಳಗೆ ಎಂಟ್ರಿ ಕೊಟ್ಟಿದ್ದನ್ನು ನೋಡಿ ಸ್ಪರ್ಧಿಗಳು ಶಾಕ್ ಆಗಿದ್ದಾರೆ.
ಬಿಗ್‌ಬಾಸ್ ಮನೆಯೊಳಗೆ ಬಿಗ್‌ಬಾಸ್ ಲೋಕ ಆಟದಲ್ಲಿ ಗಂಧರ್ವರು ಮತ್ತು ರಾಕ್ಷಸರು ಎಂದು ಎರಡು ಗುಂಪುಗಳಾನ್ನಾಗಿ ಮಾಡಿ, ಹಲವು ಟಾಸ್ಕ್ ಗಳನ್ನು ನೀಡಲಾಗಿತ್ತು. ಟಾಸ್ಕ್ ವೇಳೆ ರಾಕ್ಷಸರು ಮತ್ತು ಗಂಧರ್ವರ ಗುಂಪುಗಳ ನಡುವೆ ಭಾರೀ ಕದನವೇ ನಡೆದು ಹೋಯ್ತು. ಈ ಟಾಸ್ಕ್‌ನಲ್ಲಿ ಒಬ್ಬರಿಗೊಬ್ಬರು ಕೆಣಕಿಕೊಳ್ಳುತ್ತಿದ್ದು, ಇದರಿಂದ ಮನೆಯಲ್ಲಿ ಅನಾಹುತ ಆಗಬಹುದು ಎಂದು ಅಂದಾಜಿಸಲಾಗಿತ್ತು. ಅದೇ ರೀತಿಯೇ ಆಯಿತು.
ಟಾಸ್ಕ್ ವೊಂದರಲ್ಲಿ ಅವರ ಸಂಗೀತಾ ಹಾಗೂ ಡ್ರೋಣ್ ಪ್ರತಾಪ್ ಅವರ ಮುಖಕ್ಕೆ ಅತಿಯಾಗಿ ಕೆಮಿಕಲ್ ನೀರು ಹಾಕಿದ ಪರಿಣಾಮ ಇಬ್ಬರೂ ಅಸ್ವಸ್ಥಗೊಂಡು, ಇದೀಗ ಚಿಕಿತ್ಸೆ ಪಡೆದು ಬಿಗ್ ಬಾಸ್ ಮನೆಗೆ ಬಂದಿದ್ದಾರೆ.
ಮನೆಗೆ ಹಿಂದಿರುಗಿದ ಸಂಗೀತಾ-ಪ್ರತಾಪ್!
ವಾರದ ಕತೆ ಕಿಚ್ಚನ ಜೊತೆ | ಇಂದು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/SZhKGUCyxe
— Colors Kannada (@ColorsKannada) December 9, 2023
ಇದೀಗ ಡ್ರೋನ್ ಪ್ರತಾಪ್ ಮತ್ತು ಸಂಗೀತಾ ಚಿಕಿತ್ಸೆ ಪಡೆದು ಬಿಗ್‌ಬಾಸ್ ಮನೆಗೆ ವಾಪಸಾಗಿರುವ ಪ್ರೊಮೋ ರಿಲೀಸ್ ಮಾಡಲಾಗಿದೆ.
ಇಬ್ಬರ ಕಣ್ಣಿಗೂ ಕಪ್ಪನೇ ದಪ್ಪ ಗ್ಲಾಸ್ ಹಾಕಲಾಗಿದೆ. ಕಣ್ಣು ಸರಿಯಾಗಿ ಕಾಣಿಸುತ್ತಿಲ್ಲ ಎಂದು ಸಂಗೀತಾ ಹೇಳಿದ್ದಾರೆ. ಇವರ ಈ ಅವಸ್ಥೆ ಕಂಡು ಬಿಗ್ಬಾಸ್ನ ಇತರ ಸ್ಪರ್ಧಿಗಳು ಕಣ್ಣೀರು ಹಾಕಿದ್ದಾರೆ . ಈ ಪ್ರೊಮೋ ನೋಡಿದ ವೀಕ್ಷಕರು ಸಂಗೀತಾ ಮತ್ತು ಡ್ರೋನ್ ಪ್ರತಾಪ್ಗೆ ಅನುಕಂಪದ ಅಲೆ ಹರಿದುಬರುತ್ತಿದೆ.
ಕಾರ್ತಿಕ್ ಅಂತೂ ಇಬ್ಬರನ್ನೂ ಆ ಸ್ಥಿತಿಯಲ್ಲಿ ನೋಡಿ ಕಣ್ಣೀರು ಹಾಕಿದ್ದಾರೆ. ವಿನಯ್ ಸಂಗೀತಾ ಹಾಗೂ ಪ್ರತಾಪ್ರನ್ನು ಎದುರುಗೊಳ್ಳಲಿಲ್ಲವಾದರೂ ಅವರನ್ನು ಕಂಡು ಆತಂಕಿತಗೊಂಡಂತೆ ಕಾಣುತ್ತಿದ್ದಾರೆ. ಸದ್ಯಕ್ಕೆ ಪ್ರೋಮೋ ಅಷ್ಟೆ ಬಿಡುಗಡೆ ಆಗಿದ್ದು, ಸಂಗೀತಾ ಹಾಗೂ ಪ್ರತಾಪ್ರ ಕಣ್ಣಿಗೆ ಎಷ್ಟು ಹಾನಿ ಆಗಿದೆ ಎಂಬ ಬಗ್ಗೆ ಪೂರ್ಣ ಮಾಹಿತಿ ಇಂದಿನ ರಾತ್ರಿಯ ಎಪಿಸೋಡ್ನಲ್ಲಿ ಗೊತ್ತಾಗಲಿದೆ.