BIG BOSS | ಟಿಕೆಟ್ ಟು ಫಿನಾಲೆ ಜೊತೆಗೆ ಮನೆಯ ಕ್ಯಾಪ್ಟನ್ ಆದ ಸಂಗೀತಾ, ಹೊಸ ಟ್ವಿಸ್ಟ್ ಕೊಟ್ಟ ಬಿಗ್‌ಬಾಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ಬಾಸ್ ಮನೆಯಲ್ಲಿ ಈ ವಾರ ಟಿಕೆಟ್ ಟು ಫಿನಾಲೆ ವೀಕ್, ಫೈನಲ್ಸ್‌ನಲ್ಲಿ ತಮ್ಮ ಜಾಗ ಪಕ್ಕಾ ಮಾಡಿಕೊಳ್ಳೋದಕ್ಕೆ ಕಂಟೆಸ್ಟೆಂಟ್ಸ್ ಒದ್ದಾಡುತ್ತಿದ್ದಾರೆ.

ಇದೀಗ ಟಾಸ್ಕ್ ಪ್ರಕಾರ ಅತಿ ಹೆಚ್ಚು ಅಂಕಗಳನ್ನು ಗಳಿಸಿರುವ ಪ್ರತಾಪ್‌ಗೆ ಫಿನಾಲೆ ಟಿಕೆಟ್ ಸಿಕ್ಕಿದೆ ಎಂದು ಹೇಳಲಾಗಿತ್ತು. ಆದರೆ ಬಿಗ್‌ಬಾಸ್ ಟ್ವಿಸ್ಟ್ ನೀಡಿದ್ದು, ಸಂಗೀತಾ ಶೃಂಗೇರಿ ಫಿನಾಲೆ ಫಸ್ಟ್ ಕಂಟೆಸ್ಟೆಂಟ್ ಆಗಿದ್ದಾರೆ.

ಅತಿ ಹೆಚ್ಚು ಅಂಕಿಗಳನ್ನು ಪಡೆದ ಮೂವರು ಸದಸ್ಯರ ಮಧ್ಯೆ ಬಿಗ್‌ಬಾಸ್ ಟಾಸ್ಕ್ ನೀಡಿದ್ದು, ಇದರಲ್ಲಿ ಸಂಗೀತಾ ಗೆದ್ದಿದ್ದಾರೆ. ಟಿಕೆಟ್ ಟು ಫಿನಾಲೆ ಜೊತೆಗೆ ಕ್ಯಾಪ್ಟನ್ ಕೂಡ ಆಗಲಿದ್ದಾರೆ. ಸೀಸನ್ ಕಡೆಯ ಹಂತಕ್ಕೆ ಬಂದಾಗ ಕ್ಯಾಪ್ಟನ್ ಆದ ಸಂಗೀತಾ ಇದೀಗ ಮತ್ತೆ ಕ್ಯಾಪ್ಟನ್ ಆಗಿಯೇ ಮುಂದುವರಿಯಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!