Friday, July 1, 2022

Latest Posts

ಕೆಜಿಎಫ್-‌2 ಅಧೀರನ ಡ್ರಗ್ಸ್‌ ಕಥೆ..ವ್ಯಥೆ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

‘ಕೆಜಿಎಫ್ 2’ ಚಿತ್ರದ ವಿಲನ್‌ ಆಗಿ ನಟಿಸಿದ ಮಾಜಿ ಬಾಲಿವುಡ್ ಸ್ಟಾರ್ ಸಂಜಯ್ ದತ್ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಸಿನಿಮಾದಲ್ಲಿ ಸಂಜಯ್ ದತ್ ತಮ್ಮ ನಟನಾ ಕೌಶಲ್ಯವನ್ನು ಬಿಂಬಿಸಿದ್ದಾರೆ. ನಾಯಕನಿಗೆ ವಿಲನ್ ಆಗಿ ಕಠಿಣ ಪೈಪೋಟಿ ನೀಡಿ, ಈ ಚಿತ್ರದ ಮೂಲಕ ಸಂಜಯ್ ಮತ್ತೊಮ್ಮೆ ದೊಡ್ಡ ಯಶಸ್ಸನ್ನು ಪಡೆದರು. ಬಾಲಿವುಡ್ ನಲ್ಲೂ ಚಿತ್ರ ಭರ್ಜರಿ ಯಶಸ್ಸು ಕಂಡಿರುವ ಕಾರಣ ಸಂಜಯ್ ದತ್ ಅವರನ್ನು ಸಂದರ್ಶನ ಮಾಡಿವೆ ಅಲ್ಲಿ ಕೆಲ ಕುತೂಹಲಕಾರಿ ವಿಷಯಗಳನ್ನು ಹೇಳಿದ್ದಾರೆ.

ಈ ಹಿಂದೆ ಸಂಜಯ್ ದತ್ ಡ್ರಗ್ಸ್ ಸೇವನೆಯಿಂದಾಗಿ ಜೈಲಿಗೆ ಹೋಗಿ, ಕೆಲ ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದದ್ದು, ಆರೋಗ್ಯ ಹದಗೆಟ್ಟಿದ್ದು ಈ ಎಲ್ಲಾ ವಿಚಾರ ತಿಳಿದಿರುವುದೇ. ಆದರೆ ಇದಕ್ಕೆಲ್ಲಾ ಪ್ರಮುಖ ಕಾರಣವನ್ನು ವಿವರಿಸಿದ್ದಾರೆ.

ನಾನು ಹುಡುಗಿಯರೊಂದಿಗೆ ಮಾತನಾಡಲು ಹೆದರುತ್ತಿದ್ದೆ. ಸುಲಭವಾಗಿ ಹೆಣ್ಣುಮಕ್ಕಳೊಂದಿಗೆ ಮಾತಾಡಲು ಆಗುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ ನಾನು ಡ್ರಗ್ಸ್‌ ತೆಗೆದುಕೊಂಡೆ ಎಂದಿದ್ದಾರೆ. ಡ್ರಗ್ಸ್‌ ಸೇವನೆ ಬಳಿಕ ಆರಾಮಾಗಿ ಮಾತನಾಡಬಹುದು ಎಂದು ತಿಳಿದು ಡ್ರಗ್ಸ್ ತೆಗೆದುಕೊಳ್ಳಲು ಪ್ರಾರಂಭಿಸಿದೆ, ಎಂದಿದ್ದಾರೆ.

ಆದರೆ ಕೊನೆಗೆ ನನ್ನನ್ನು ಮಾದಕ ವ್ಯಸನಿಯನ್ನಾಗಿ ಮಾರ್ಪಾಡು ಮಾಡಿತು. ಡ್ರಗ್ಸ್ ನಿಂದ ಹೊರಬರುವುದು ಎಷ್ಟು ಕಷ್ಟ ಎಂದು ನನಗೇ ಗೊತ್ತು. ನಾನು ನನ್ನ ಜೀವನದ ಹತ್ತು ವರ್ಷಗಳನ್ನು ಲಿವಿಂಗ್ ರೂಮ್ ಮತ್ತು ಬಾತ್‌ ರೂಂನಲ್ಲಿ ಕಳೆದಿದ್ದೇನೆ ಎಂದರು. ಎಲ್ಲಾ ಮರೆತು ವಾಪಸಾದ ಮೇಲೆ ಮಾದಕ ವ್ಯಸನಿ ಎಂದು ಕರೆದರು ಅದನ್ನು ತೊಡೆದುಹಾಕಲು ಮತ್ತೆ ನಟನೆ, ಫಿಟ್‌ನೆಸ್‌ ಕಡೆ ಗಮನ ಹರಿಸಿದೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss