September 12, 2026
Saturday, September 12, 2026
spot_img

ಸಂಜಯ ಕಪೂರ್‌ ಆಸ್ತಿಗಾಗಿ ಹಾಲಿ-ಮಾಜಿ ಪತ್ನಿ ಫೈಟ್: ಕೋರ್ಟ್ ಗೆ ಪ್ರಿಯಾ ಕಪೂರ್ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉದ್ಯಮಿ ಸಂಜಯ್ ಕಪೂರ್ ಅವರ ಎಸ್ಟೇಟ್‌ ಆಸ್ತಿ ವಿವಾದಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕರಿಷ್ಮಾ ಕಪೂರ್ ಅವರ ಮಕ್ಕಳು ಕೇಸ್ ದಾಖಲಿಸುವ ಮುನ್ನವೇ ಕುಟುಂಬ ಟ್ರಸ್ಟ್‌ನಿಂದ ಈಗಾಗಲೇ ರೂ. 1,900 ಕೋಟಿ ಮೌಲ್ಯದ ಆಸ್ತಿಯನ್ನು ಪಡೆದಿದ್ದಾರೆ ಎಂದು ಹಾಲಿ ಪತ್ನಿ ಪ್ರಿಯಾ ಕಪೂರ್ ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಪ್ರಿಯಾ ಕಪೂರ್ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿದ ವಕೀಲರು, ಈಗಾಗಲೇ ರೂ. 1,900 ಕೋಟಿ ಮೌಲ್ಯದ ಆಸ್ತಿಯನ್ನು ಕರಿಷ್ಮಾ ಕಪೂರ್ ಮಕ್ಕಳಿಗೆ ವರ್ಗಾಯಿಸಲಾಗಿದೆ. ಇನ್ನೇಷ್ಟು ಹಣ ನೀಡಬೇಕು ಎಂಬುದು ನನಗೆ ಗೊತ್ತಾಗುತ್ತಿಲ್ಲ ಎಂದು ಹೇಳಿದರು.

ಮಕ್ಕಳಿಗೆ ಅವರ ತಂದೆ ಆಸ್ತಿಯಲ್ಲಿ ಪಾಲು ನೀಡಿಲ್ಲ. ಅವರ ನ್ಯಾಯಯುತ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂಬ ಆರೋಪಕ್ಕೆ ವಕೀಲರು ಈ ರೀತಿಯ ಹೇಳಿಕೆ ನೀಡಿದರು.

ಆದಾಗ್ಯೂ, ಭಾರತೀಯ ಕಾನೂನಿನ ಅಡಿಯಲ್ಲಿ ಟ್ರಸ್ಟ್ ಸ್ವತ್ತುಗಳು ಮತ್ತು ವೈಯಕ್ತಿಕ ಆಸ್ತಿಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ ಎಂದು ಕಾನೂನು ತಜ್ಞರು ಹೇಳುತ್ತಾರೆ. ಭಾರತೀಯ ಟ್ರಸ್ಟ್‌ಗಳ ಕಾಯ್ದೆ 1882 ರ ಅಡಿಯಲ್ಲಿ ಟ್ರಸ್ಟ್‌ಗೆ ವರ್ಗಾಯಿಸಲಾದ ಸ್ವತ್ತುಗಳನ್ನು ಟ್ರಸ್ಟಿಗಳು ನಿರ್ವಹಿಸುತ್ತಾರೆ ಮತ್ತು ಅದರ ನಿಯಮಗಳಂತೆ ಆಸ್ತಿ ಪಡೆಯುತ್ತಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !