ಸಂಕ್ರಾಂತಿಗೆ ಮಾಡಿ ವಿಶೇಷ ಅನಾನಸ್‌ ಕೇಸರಿಬಾತ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಹಬ್ಬಕ್ಕೆ ಸಿಹಿ ತಿಂಡಿ ಇರಲೇಬೇಕು, ಅದ್ರಲ್ಲೂ ಸುಲಭವಾಗಿ ವಿಶೇಷವಾದ ತಿಂಡಿ ಮಾಡಿದ್ರೆ ಎಷ್ಟು ಸೊಗಸು ಅಲ್ವಾ…

ಹಾಗಾದ್ರೆ ಹಬ್ಬಕ್ಕೆ ವಿಶೇಷವಾದ ಅನಾನಸ್‌ ಕೇಸರಿಬಾತ್‌ ಮಾಡಲು ಏನೆಲ್ಲಾ ಸಾಮಗ್ರಿಗಳು ಬೇಕು ಮತ್ತು ಅದನ್ನು ತಯಾರಿಸುವುದು ಹೇಗೆ ಎಂದು ಇಲ್ಲಿ ತಿಳಿಯೋಣ.

ಬೇಕಾಗುವ ಸಾಮಗ್ರಿಗಳು :
*ಅನಾನಸ್‌ ಪ್ಯೂರಿ
*ಬೆಣ್ಣೆ
*ಸಕ್ಕರೆ
*ಹಾಲು
*ರವೆ
*ಸಕ್ಕರೆ
*ಏಲಕ್ಕಿ
*ಕೇಸರಿ

ಮಾಡುವ ವಿಧಾನ :
ಮೊದಲು ಒಲೆ ಮೇಲೆ ಪಾತ್ರೆ ಇಡಿ, ಅದಕ್ಕೆ ಅನಾನಸ್ ಪ್ಯೂರಿಯನ್ನು ಹಾಕಿಕೊಳ್ಳಿ. ನಂತರ ಅದಕ್ಕೆ ಸಕ್ಕರೆ ಸೇರಿಸಿ. ಅದನ್ನು ಸರಿಯಾಗಿ ಮಿಶ್ರಣ ಮಾಡಿಕೊಂಡು ಕುದಿಯಲು ಬಿಡಿ. ಈಗ ಇನ್ನೊಂದು ತವಾ ತೆಗೆದುಕೊಂಡು ಅದರಲ್ಲಿ ರವೆಯನ್ನು ಬೆಣ್ಣೆಯೊಂದಿಗೆ ಬಿಸಿ ಮಾಡಿ. ನಂತರ ರವೆಗೆ ಕೊಬ್ಬು ಹಾಲನ್ನು ಹಾಕಿ. ತಕ್ಷಣ ಇದಕ್ಕೆ ಸ್ವಲ್ಪ ನೀರನ್ನು ಹಾಕಿಕೊಂಡು ಸರಿಯಾಗಿ ಕಲಸಿ. ಕೆಲವು ನಿಮಿಷ ತಿರುಗಿಸುತ್ತಾ ಇರಬೇಕು. ಇದು ದಪ್ಪಗೆ ಆದಾಗ ಸಕ್ಕರೆ ಬದಲಿಯನ್ನು ಹಾಕಿ. ಇದು ಸರಿಯಾಗಿ ಮಿಶ್ರಣವಾಗುವ ತನಕ ತಿರುಗಿಸಿ. ಈಗ ಇದಕ್ಕೆ ಅನಾನಸ್ ಪ್ಯೂರಿಯನ್ನು ಹಾಕಿಕೊಳ್ಳಿ. ಮಧ್ಯಮ ಬೆಂಕಿಯೊಂದಿಗೆ ಇದನ್ನು ಕುದಿಸಿ.‌ ನಂತರ ಕೇಸರಿ ಹಾಕಿದ ಹಾಲನ್ನು ಇದಕ್ಕೆ ಸೇರಿಸಿ. ಏಲಕ್ಕಿ ಹುಡಿಯನ್ನು ಮಿಶ್ರಣಕ್ಕೆ ಹಾಕಿ ಬೇಯಲು ಬಿಟ್ಟರೆ ಅನಾನಸ್‌ ಕೇಸರಿಬಾತ್‌ ರೆಡಿ. ಅಲಂಕಾರಕ್ಕೆ ಬಾದಾಮಿ, ಗೋಡಂಬಿ ಮತ್ತು ದ್ರಾಕ್ಷಿಯನ್ನು ಹಾಕಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!