ಗಲ್ಲಿ ಕ್ರಿಕೆಟ್‌ ನಲ್ಲಿ ಸಂಸ್ಕೃತ ಕಾಮೆಂಟ್ರಿ ಕೇಳಿ ಮನಸೋತ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಈ ಹಿಂದೆ ಕ್ರಿಕೆಟ್ ನಲ್ಲಿ ಇಂಗ್ಲಿಷ್, ಹಿಂದಿಯಲ್ಲಿ ಮಾತ್ರ ಕಾಮೆಂಟ್ರಿ ಕೇಳಿಬರುತ್ತಿತ್ತು. ಆದರೆ ಪ್ರಾದೇಶಿಕ ಭಾಷೆಗಳಲ್ಲಿ ಕ್ರೀಡಾ ಚಾನೆಲ್‌ ಗಳು ಪ್ರಾರಂಭವಾದ ಬಳಿಕ ಕನ್ನಡ ಸೇರಿದಂತೆ ತಮ್ಮ ಮಾತೃಭಾಷೆಗಳಲ್ಲಿಯೇ ಕಾಮೆಂಟ್ರಿ ಕೇಳಿ ಆನಂದಿಸುವ ಭಾಗ್ಯ ವಿಕ್ಷಕರದ್ದಾಯಿತು. ನೀವು ಹಲವಾರು ಭಾಷೆಗಳಲ್ಲಿ ಕಾಮೆಂಟ್ರಿ ಕೇಳಿರಬಹುದು. ಆದರೆ ಎಂದಾದರೂ ದೇವಭಾಷೆ ಸಂಸ್ಕೃತದಲ್ಲಿ ಕಾಮೆಂಟ್ರಿ ಕೇಳಿದ್ದೀರಾ?. ಕನ್ನಡಿಗರೊಬ್ಬರು ಅಂತಹದ್ದೊಂದು ಪ್ರಯತ್ನ ಮಾಡಿ ವೈರಲ್ ಆಗಿದ್ದಾರೆ. ಇದನ್ನು ಕೇಳಿದ ಪ್ರಧಾನಿ ನರೇಂದ್ರ ಮೋದಿಯವರು ಸಹ ಸಂಸ್ಕೃತ ಕಾಮೆಂಟ್ರಿ ಕಂಪಿಗೆ ಮನಸೋತಿದ್ದಾರೆ.
ಲಕ್ಷ್ಮೀನಾರಾಯಣ ಬಿ.ಎಸ್​. ಎಂಬ ಟ್ವಿಟರ್ ಖಾತೆದಾರರು ‘ಸಂಸ್ಕೃತ ಮತ್ತು ಕ್ರಿಕೆಟ್​’ ಎಂದು ಶೀರ್ಷಿಕೆಯಡಿ ಬೆಂಗಳೂರಿನ ಗಿರಿನಗರ ಸಮೀಪ ಗಲ್ಲಿ ಮಕ್ಕಳು ಕ್ರಿಕೆಟ್‌ ಆಡುತ್ತಿರುವ ಈ ವಿಡಿಯೋ ಹಂಚಿಕೊಂಡಿದ್ದಾರೆ. ಲಯಭದ್ಧವಾಗಿ ಹಾಗೂ ನಿರರ್ಗಳವಾಗಿ ಸಾಗುವ ಈ ಕಾಮೆಂಟರಿ ಕೇಳಿ ಸಾವಿರಾರು ನಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. ವೀಡಿಯೊ ಈ ವರೆಗೆ 5 ಲಕ್ಷದ 37,000 ಕ್ಕೂ ಹೆಚ್ಚಿನ ವೀಕ್ಷಣೆಗಳ ಕಂಡಿದೆ. 20,000 ಲೈಕ್‌ಗಳು ಬಿದ್ದಿದ್ದು, 2000 ಕ್ಕೂ ಹೆಚ್ಚು ಜನರು ಮರುಟ್ವೀಟ್ ಮಾಡಿದ್ದಾರೆ.

ಇದೀಗ ಈ ವಿಡಿಯೋ ಪ್ರಧಾನಿ ಮೋದಿಯವರ ಗಮನ ಸೆಳೆದಿದ್ದು, ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು ಮಕ್ಕಳನ್ನು ಶ್ಲಾಘಿಸಿದ್ದಾರೆ. ” ಸಂಸ್ಕೃತದಲ್ಲಿ ಕಾಮೆಂಟ್ರಿ ಕೇಳಲು ಹೃದಯಸ್ಪರ್ಶಿಯಾಗಿದೆ.  ಈ ಪ್ರಯತ್ನವನ್ನು ಕೈಗೊಂಡವರಿಗೆ ಅಭಿನಂದನೆಗಳು. ಸಂಸ್ಕೃತ ಭಾಷೆಯನ್ನು ಪುನರುಜ್ಜೀವನಗೊಳಿಸುವ ಇಂತಹ ಪ್ರಯತ್ನಗಳಿಗೆ ನಮ್ಮ ಮೆಚ್ಚುಗೆ ಇರುತ್ತದೆ ಎಂದಿದ್ದಾರೆ.

“ನಿರ್ಲಕ್ಷಿಸಲ್ಪಟ್ಟ ಭಾಷೆಯನ್ನು ಪುನರುಜ್ಜೀವನಗೊಳಿಸುವ, ಸಂಸ್ಕೃತ ಪತಾಕೆಯನ್ನು ಎತ್ತರಕ್ಕೆ ಹಾರಿಸುವ ಪ್ರಯತ್ನ ನಡೆಸುತ್ತಿರುವ ಯುವಕರಿಗೆ ಅಭಿನಂದನೆಗಳು ಎಂದು ನೆಟ್ಟಿಗರೊಬ್ಬರು ಶ್ಲಾಘಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!