ಹೊಸದಿಗಂತ ವರದಿ ಧಾರವಾಡ:
ತೀವ್ರ ಕುತೂಹಲ ಕೆರಳಿಸಿದ ಮಲೆನಾಡಿನ ಸೆರಗು ಹಾಗೂ ತೊಟ್ಟಿಸಲು ನಗರಿ ಕಲಘಟಗಿ ವಿಧಾನಸಭೆ ಕ್ಷೇತ್ರದ ಅಧಿಪಥ್ಯ ಕಾಂಗ್ರೆಸ್ ಅಭ್ಯರ್ಥಿ ಸಂತೋಷ ಲಾಡ್ ಗೆ ಒಲಿದಿದೆ.
ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನಲೆ ಬಿಜೆಪಿ ಟಿಕೆಟ್ ತಂದ ನಾಗರಾಜ ಛಬ್ಬಿ ಹಾಗೂ ಕಾಂಗ್ರೆಸ್ ನ ಸಂತೋಷ ಲಾಡ್ ಈ ಇಬ್ಬರು ಸ್ನೇಹಿತರ ತೀವ್ರ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿತ್ತು.
ಶನಿವಾರ ನಡೆದ 17 ಸುತ್ತಿನ ಮತ ಎಣಿಕೆಯಲ್ಲಿ ಮೊದಲಿಂದಲೂ ಲಾಡ್ ಮುನ್ನಡೆ ಸಾಧಿಸಿ ಅಂತಿಮವಾಗಿ 14,372 ಮತಗಳ ಅಂತರದಿಂದ ವಿಜಯದ ಮಾಲೆ ಧರಿಸಿದರು.
ಸಂತೋಷ ಲಾಡ್ 85,529 ಮತ ಪಡೆದರೆ, 71,157 ಮತ ಪಡೆದ ಬಿಜೆಪಿಯ ನಾಗರಾಜ ಛಬ್ಬಿ ಸೋಲಿನ ಕಹಿ ಅನುಭವಿಸಿದರು.