300 ಉದ್ಯೋಗಿಗಳನ್ನು ಹೊರಹಾಕಿದ ಸ್ಯಾಪ್‌ ಲ್ಯಾಬ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜರ್ಮನ್‌ ಮೂಲದ ತಂತ್ರಜ್ಞಾನ ಕಂಪನಿಯಾದ SAP ಲ್ಯಾಬ್ಸ್‌ ಇಂಡಿಯಾ ಭಾರತದಲ್ಲಿ ತನ್ನ ಕಚೇರಿಗಳಾದ್ಯಂತ 300 ಉದ್ಯೋಗಿಗಳನ್ನು ವಜಾಗೊಳಿಸಿದೆ. ಸ್ಯಾಪ್‌ ಲ್ಯಾಬ್ಸ್‌ ಇಂಡಿಯಾವು ವಿವಿಧ ಯೋಜನೆಗಳನ್ನು ನಿರ್ವಹಿಸುವ ಜಾಗತಿಕ ಕೇಂದ್ರವೊಂದನ್ನು ಮುಚ್ಚಿದ್ದು ಇದರ ಪರಿಣಾಮವಾಗಿ ಉದ್ಯೋಗಕಡಿತಗಳು ಸಂಭವಿಸಿವೆ ಎಂದು ಎಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ.

ವಜಾಗೊಳಿಸುವಿಕೆಯು ಬೆಂಗಳೂರು ಮತ್ತು ಗುರಗಾಂವ್‌ನ ಕಚೇರಿಗಳಾದ್ಯಂತ ನೌಕರರ ಮೇಲೆ ಪರಿಣಾಮ ಬೀರಿದೆ. ವಜಾಗೊಂಡ ಉದ್ಯೋಗಿಗಳಲ್ಲಿ ಕೆಲವರು 10-15 ವರ್ಷ ಅನುಭವ ಹೊಂದಿದವರೂ ಸೇರಿದ್ದಾರೆ ಎನ್ನಲಾಗಿದೆ. ವಜಾಗೊಂಡ ಎಲ್ಲ ಉದ್ಯೋಗಿಗಳಿಗೂ ಪರಿಹಾರ ಪ್ಯಾಕೇಜ್‌ ನೀಡಲಾಗಿದೆ. ಕಳೆದ ತಿಂಗಳ ಕೊನೆಯಲ್ಲಿ, SAP ಲ್ಯಾಬ್ಸ್ ಮೂಲ ಕಂಪನಿ SAP 3,000 ಉದ್ಯೋಗಗಳನ್ನು ಅಥವಾ ಅದರ ಜಾಗತಿಕ ಉದ್ಯೋಗಿಗಳ ಶೇಕಡಾ 2.5 ರಷ್ಟು ಕಡಿತಗೊಳಿಸುವುದಾಗಿ ಘೋಷಿಸಿತ್ತು.

ಆರ್ಥಿಕ ಅನಿಶ್ಚಿತತೆಯ ಕಾರಣ ಕಟ್ಟುನಿಟ್ಟಿನ ಹಣಕಾಸು ಕ್ರಮಗಳನ್ನು ಅನುಸರಿಸಲಾಗುತ್ತಿದ್ದು ಇದರ ಪರಿಣಾಮ ಉದ್ಯೋಗ ಕಡಿತಗಳು ನಡೆಯಲಿವೆ ಎಂದು ಕಂಪನಿ ಈ ಹಿಂದೆ ಹೇಳಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!