ಯುವ ರಾಜ್​ಕುಮಾರ್ ಪತ್ನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಸಪ್ತಮಿ ಗೌಡ

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ನಟ ಯುವ ರಾಜ್​ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ವಿರುದ್ಧ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಜೊತೆಗೆ ನಟಿ ಸಪ್ತಮಿ ಗೌಡ ಹೆಸರನ್ನು ಸಹ ಪ್ರಕರಣದಲ್ಲಿ ಕೇಳಿಸಿತ್ತು. ಸಪ್ತಮಿ ಗೌಡ ಹಾಗೂ ಯುವರಾಜ್ ಪರಸ್ಪರ ಸಂಬಂಧದಲ್ಲಿದ್ದಾರೆ. ತಾವು ಅಮೆರಿಕಕ್ಕೆ ತೆರಳಿದಾಗ ಯುವ ಹಾಗೂ ಸಪ್ತಮಿ ಸಜೀವನ ನಡೆಸಿದ್ದಾರೆ ಎಂದು ಶ್ರೀದೇವಿ ಭೈರಪ್ಪ ಆರೋಪ ಮಾಡಿದ್ದರು.

ಇದೀಗ ನಟಿ ಸಪ್ತಮಿ ಗೌಡ, ಶ್ರೀದೇವಿ ಭೈರಪ್ಪ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ಶ್ರೀದೇವಿ ಭೈರಪ್ಪ ವಿರುದ್ಧ ಕೋರ್ಟ್ ಮೆಟ್ಟಿಲೇರಿರುವ ಸಪ್ತಮಿ ಗೌಡ ನಿರ್ಬಂಧಕಾಜ್ಞೆ ನೀಡುವಂತೆ ಮನವಿ ಮಾಡಿದ್ದಾರೆ. ತಮ್ಮ ವಿರುದ್ಧ ಶ್ರೀದೇವಿ, ಇಲ್ಲ ಸಲ್ಲದ ಹೇಳಿಕೆ ನೀಡಿದ್ದಾರೆ. ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ಸಪ್ತಮಿ ಆರೋಪ ಮಾಡಿದ್ದು, ಶ್ರೀದೇವಿ ಭೈರಪ್ಪ ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ನೀಡುವಂತೆ ನಿರ್ಬಂಧಕಾಜ್ಞೆ ನೀಡುವಂತೆ ಮನವಿ ಸಲ್ಲಿಸಿದ್ದರು.

ಸಪ್ತಮಿ ಗೌಡ ಮನವಿ ಪುರಸ್ಕರಿಸಿದ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ, ಇಂತಹ ಹೇಳಿಕೆ ನೀಡದಂತೆ ಕೋರ್ಟ್ ನಿರ್ಬಂಧಕಾಜ್ಞೆ ನೀಡಿದೆ.ಯುವ ರಾಜಕುಮಾರ ಪ್ರಕರಣದಲ್ಲಿ ಇಲ್ಲ ಸಲ್ಲದ ಆರೋಗಳನ್ನು ಹೊರಿಸಿ ಚಾರಿತ್ರಿಕ ವಧೆ ಮಾಡದಂತೆ, ಮಾನಹಾನಿ ಹೇಳಿಕೆ ನೀಡದಂತೆ ನಿರ್ಬಂಧಕಾಜ್ಞೆ ವಿಧಿಸಿ ಆದೇಶಿಸಿದೆ. ಜೊತೆಗೆ ಶ್ರೀದೇವಿ ಭೈರಪ್ಪ ಅವರಿಗೆ ನೊಟೀಸ್ ಜಾರಿ ಮಾಡುವಂತೆ ತಿಳಿಸಿದೆ.

ಶ್ರೀದೇವಿ ಭೈರಪ್ಪ ಪ್ರಸ್ತುತ ವಿದೇಶದಲ್ಲಿದ್ದಾರೆ. ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣದಲ್ಲಿ ತೊಡಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!