ಮಕ್ಕಳ‌ ದಸರಾ ಸಮಾರೋಪ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ ಸರಿಗಮಪ ಖ್ಯಾತಿಯ ನೇಹಾ ಆರ್

ಹೊಸದಿಗಂತ ವರದಿ ಹಾಸನ :

ಶಿವಮೊಗ್ಗದ ವಿನೋಭನಗರದಲ್ಲಿರುವ ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿರುವ ಮಕ್ಕಳ ದಸರಾ ಸಮರೋಪ ಸಮಾರಂಭವನ್ನು ಸರಿಗಮಪ ಸೀಸನ್ 16ರಲ್ಲಿ ಭಾಗವಹಿಸಿ ಪುಟ್ಟ ಧನಿಯ ಮೂಲಕವೇ ಮನೆಮಾತಾದ ಬೇಲೂರಿನ ನೇಹಾ.ಆರ್ ಉದ್ಘಾಟನೆ ಮಾಡಲಿದ್ದಾರೆ.

ಹಾಸನ ಜಿಲ್ಲೆಯ ಬೇಲೂರಿನ ಕೃಷ್ಣ ಸುಂದರಿ ಎಂದೇ ಕರೆಯಲ್ಪಡುವ ನೇಹಾ ಆರ್ ಮತ್ತು ಡ್ರಾಮಾ ಜೂನಿಯರ್ ಸೀಸನ್ 4ರ ವಿಜೇತೆ ರಿಧಿ ಎಸ್ ಅವರು ಅ.18 ರಂದು ಸಂಜೆ 6 ಗಂಟೆಗೆ ಶಿವಮೊಗ್ಗದ ವಿನೋಭವಗರದಲ್ಲಿರುವ ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿರುವ ಮಕ್ಕಳ ದಸರಾ ಸಮರೋಪವನ್ನು ಉದ್ಘಾಟನೆ ಮಾಡಲಿದ್ದಾರೆ.

ಜೀ ಕನ್ನಡ ವಾಹಿನಿಯ ಸರಿಗಮಪ ಸೀಸನ್ 14ರಲ್ಲಿ ನೇಹಾ.ಆರ್ ಅವರು ತಮ್ಮದೆ ಪುಟ್ಟ ಧನಿಯಲ್ಲಿ ಹಾಡುವ ಮೂಲಕ ಕಾರ್ಯಕ್ರಮ ವೀಕ್ಷಕರ ಮತ್ತು ತೀರ್ಪುಗಾರರ ಮನಗೆದ್ದಿದ್ದರು. ಈಗಾಗಲೇ ಸಂಗೀತ ಕ್ಷೇತ್ರದಲ್ಲಿ ಅನೇಕ ವೇದಿಕೆಗಳಲ್ಲಿ ಹಾಡಿ ಮನೆಮಾತಾಗಿದ್ದಾರೆ.

ವಿಶೇಷ ಕಾರ್ಯಕ್ರಮಗಳಲ್ಲಿ ಹಾಗೂ ದೊಡ್ಡ ದೊಡ್ಡ ವೇದಿಕೆಗಳಲ್ಲಿ ನೇಹಾ.ಆರ್ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು‌ ನೀಡಿ ಯಶಸ್ವಿ ಕಂಡಿದ್ದಾರೆ. ಮಕ್ಕಳ ದಸರಾ ಸಮಾರೋಪ ಸಮಾರಂಭವನ್ನು ಬೇಲೂರಿನ ನೇಹಾ ಅವರು ಉದ್ಘಾಟಿಸುತ್ತಿರುವುದು ನಮ್ಮ ಬೇಲೂರಿನ ಜನತೆಗೆ ಖುಷಿ ತಂದುಕೊಟ್ಟಿದೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಶಿಲ್ಪಕಲೆಗಳ ಬೇಲೂರು ಜನತೆಗೆ ‌ಹೆಮ್ಮೆಯ ವಿಚಾರ

ನೇಹಾ ಆರ್ ಅವರು ಶಿಲ್ಪಕಲೆಗಳ ತವರೂರು ಎಂದೇ ಪ್ರಖ್ಯಾತಿ ಪಡೆದಿರುವ ಬೇಲೂರಿನ ವಿಶೇಷ ಪ್ರತಿಭೆ ಎಂದೇ ಹೇಳಬಹುವುದು. ಸಂಗೀತ ಕ್ಷೇತ್ರದಲ್ಲಿ ಅನೇಕ ವೇದಿಕೆಗಳಲ್ಲಿ ಈಗಾಗಲೇ ಕಾಣಿಸಿಕೊಳ್ಳುವ ಅವರು ಸಂಗೀತ ಕೇಳುಗರ ಮನಗೆದ್ದಿದ್ದಾರೆ. ಈ ಪುಟ್ಟ ವಯಸ್ಸಿನಲ್ಲಿಯೇ ಇವರ ಸಾಧನೆ ನಿಜಕ್ಕೂ ಶ್ಲಾಘನೀಯ. ನೇಹಾ.ಆರ್ ಅವರಿಗೆ ಇನ್ನಷ್ಟು ಒಳ್ಳೆಯ ಅವಕಾಶಗಳು ದೊರೆತು ಅವರ ಭವಿಷ್ಯ ಉಜ್ವಲವಾಗಲಿ ಎಂದು ಬೇಲೂರಿನ ಜನತೆ ಶುಭಹಾರೈಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!