ಅಂಕೋಲಾದಲ್ಲಿ ʻಸರ್ವಂ ಮೋದಿಮಯಂʼ: ಪ್ರಧಾನಿಗಾಗಿ ಕಾಲ್ನಡಿಗೆಯಲ್ಲೇ ಬಂದ ಅಭಿಮಾನಿಗಳು!

ಹೊಸದಿಗಂತ ವರದಿ ಅಂಕೋಲಾ:‌ 

ಅಂಕೋಲಾದಲ್ಲಿ ಪ್ರಧಾನಿ ಭೇಟಿಗೂ ಮುನ್ನವೇ ಮೋದಿ ಮೇನಿಯಾ ಶುರುವಾಗಿದೆ. ಎಲ್ಲಿ ನೋಡಿದರೂ ಸರ್ವ ಮೋದಿಮಯಂ ಆಗಿದೆ.  ನರೇಂದ್ರ ಮೋದಿ ಅವರ ಮೇಲಿನ ಅಭಿಮಾನದಿಂದ ಜನರು ಕಾಲ್ನಡಿಗೆಯಲ್ಲೇ ನಡೆದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲು ಸಾಲಾಗಿ ಕಾರ್ಯಕ್ರಮ ನಡೆಯುವ ಗೌರಿಕೆರೆ ಪ್ರದೇಶಕ್ಕೆ ಬರುತ್ತಿರುವುದು ಕಂಡು ಬಂತು.

ಮುಂಜಾನೆ 9 ಘಂಟೆಯಿಂದಲೇ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸೇರತೊಡಗಿದ್ದು 11 ಘಂಟೆಯಷ್ಚರಲ್ಲಿ ಎಲ್ಲಾ ಆಸನಗಳು ಭರ್ತಿಯಾಗಿದ್ದವು. ಕಿಕ್ಕಿರಿದು ತುಂಬಿದ ಜನಸಾಗರದಿಂದ ʻಭಾರತ್ ಮಾತಾಕಿ ಜೈ, ಮೋದಿ ಮೋದಿ ಹರ ಹರ ಮೋದಿ ಘರ್ ಘರ್ ಮೋದಿʼ
ನಿರಂತರ ಘೋಷಣೆ ಕೇಳಿ ಬಂತು.

ಎಲ್ಲಡೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ವಿ.ಐ.ಪಿ ಮತ್ತು ವಿ.ವಿ.ಐ.ಪಿ ಸ್ಥಳಗಳಿಗೆ ಪ್ರವೇಶ ಮಾಡುವ ಪ್ರತಿಯೊಬ್ಬರನ್ನೂ ತಪಾಸಣೆ ನಡೆಸಿ ಪ್ರವೇಶಕ್ಕೆ ಅವಕಾಶ ನೀಡಲಾಯಿತು.

ನೂರಾರು ಸಂಖ್ಯೆಯ ಪೊಲೀಸ್ ಅಧಿಕಾರಿಗಳು, ಸಾವಿರಾರು ಸಿಬ್ಬಂದಿ ಬಂದೋಬಸ್ತ್ ವ್ಯವಸ್ಥೆಯಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಪೂರ್ವದಲ್ಲಿ ವಿವಿಧ ಕಲಾ ತಂಡಗಳಿಂದ ಮನರಂಜನಾ ಕಾರ್ಯಕ್ರಮ ನಡೆಯಿತು ಅಂಕೋಲಾದ ಖ್ಯಾತ ಗಾಯಕ ಪ್ರಶಾಂತ ಶೆಟ್ಟಿ ಪ್ರಸ್ತುತ ಪಡಿಸಿದ ಮೋದಿಜಿ ಆಗಮನ ನಮ್ಮೆಲ್ಲರ ಶುಭ ನಮನ ಹಾಡು, ನೀಲ್ಕೋಡ ಶಂಕರ ಹೆಗಡೆ ತಂಡದ ಯಕ್ಷಗಾನ, ನಾಟ್ಯ ವೈಭವದಲ್ಲಿ ರಾಮಕೃಷ್ಣ ಹಿಲ್ಲೂರು, ಆನಂದ ಅಂಕೋಲಾ ಅವರ ಕಂಠಸಿರಿಯಲ್ಲಿ ಮೂಡಿ ಬಂದ ಭರತ ಭೂಮಿಯ ಹೆಮ್ಮೆಯ ನಾಯಕ ಮೋದಿಗೆ ಸುಸ್ವಾಗತ, ಮೆರೆಯುತಿಹುದು ರಾಮ ಮಂದಿರ ಮೋದಿಯಿಂದ, ಹಾಗೂ ಯಕ್ಷ ನೃತ್ಯ ಮೋದಿ ಅಭಿಮಾನಿಗಳನ್ನು ರಂಜಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!