ಹತ್ರಾಸ್‌ನ ಸತ್ಸಂಗದಲ್ಲಿ ಕಾಲ್ತುಳಿತ: 3,200 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹತ್ರಾಸ್‌ನಲ್ಲಿ ನಡೆದ ಸತ್ಸಂಗದಲ್ಲಿ ಕಾಲ್ತುಳಿತದಲ್ಲಿ 121 ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ ಶೀಟ್ ಸಲ್ಲಿಸಿದ್ದಾರೆ. 3,200 ಪುಟಗಳ ಈ ಚಾರ್ಜ್ ಶೀಟ್ ನಲ್ಲಿ 11 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಿದೆ.

ಪೊಲೀಸರು ಪ್ರಮುಖ ಆರೋಪಿಗಳಾದ ದೇವ್ ಪ್ರಕಾಶ್ ಮಧುಕರ್, ಮೇಘ್‌ ಸಿಂಗ್, ಮುಖೇಶ್ ಕುಮಾರ್, ಮಂಜು ದೇವಿ, ಮಂಜು ಯಾದವ್, ರಾಮ್ ಲಾಡೆಟೆ, ಉಪೇಂದ್ರ ಸಿಂಗ್, ಸಂಜು ಕುಮಾರ್, ರಾಮ್ ಪ್ರಕಾಶ್ ಶಾಕ್ಯಾ, ದುರ್ವೇಶ್ ಕುಮಾರ್ ಮತ್ತು ದಲ್ವೀರ್ ಸಿಂಗ್ ಅವರನ್ನು ಬಂಧಿಸಿದ್ದಾರೆ. ಈ ಪೈಕಿ ಮಹಿಳಾ ಮಂಜು ದೇವಿ ಮತ್ತು ಮಂಜು ಯಾದವ್ ಅವರ ಮಧ್ಯಂತರ ಜಾಮೀನಿಗೆ ಹೈಕೋರ್ಟ್ ಅನುಮೋದನೆ ನೀಡಿದೆ.

ಜುಲೈ 2 ರಂದು, ಸಿಕಂದರರಾವ್‌ನ ಫುಲ್ರೈ ಮುಗಲ್‌ಗರ್ಹಿ ಗ್ರಾಮದಲ್ಲಿ ನಾರಾಯಣ ಸಕರ್ ಹರಿ ಭೋಲೆ ಬಾಬಾ ಅಲಿಯಾಸ್ ಸೂರಜ್‌ಪಾಲ್ ಅವರ ಸತ್ಸಂಗದ ಸಂದರ್ಭದಲ್ಲಿ ಕಾಲ್ತುಳಿತದಲ್ಲಿ 121 ಜನರು ಸಾವನ್ನಪ್ಪಿದರು. ಸತ್ಸಂಗದಲ್ಲಿ 80,000 ಜನರ ಬದಲಿಗೆ 2.5 ಲಕ್ಷ ಜನರನ್ನು ಒಟ್ಟುಗೂಡಿಸಿ ಪೋಲಿಸರ ಷರತ್ತನ್ನು ಉಲ್ಲಂಘಿಸಲಾಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಎಫ್‌ಐಆರ್‌ನಲ್ಲಿ ನಾರಾಯಣ್ ಸಕರ್ ಹರಿ ಬಾಬಾ ಅಲಿಯಾಸ್ ಸೂರಜ್‌ಪಾಲ್ ಹೆಸರು ಇರಲಿಲ್ಲ. ಸದ್ಯ ಬಂಧಿತ ಆರೋಪಿಗಳ ವಿರುದ್ಧವೇ ಚಾರ್ಜ್ ಶೀಟ್ ಕೂಡ ಸಲ್ಲಿಕೆಯಾಗಿದ್ದು, ಮಾಹಿತಿಗಳ ಪ್ರಕಾರ ಅದರಲ್ಲಿ ಬಾಬಾ ಹೆಸರು ಇಲ್ಲ ಎಂದು ಪೋಲಿಸ್ ಮೂಲಗಳು ಹೇಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!