ಹೊಸದಿಗಂತ ಡಿಜಿಟಲ್ ಡೆಸ್ಕ್:
ಎರಡು ವರ್ಷದ ಬಾಲಕ ಸಾತ್ವಿಕ್ ಆಟವಾಡುತ್ತಿದ್ದಾಗ ಬಾವಿಗೆ ಬಿದ್ದು 20 ಗಂಟೆಯ ಬಳಿಕ ಸುರಕ್ಷಿತವಾಗಿ ಹೊರಬಂದಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಬಾಲಕ ಸಾತ್ವಿಕ್ ಸೂಕ್ತ ಚಿಕಿತ್ಸೆ ಪಡೆದು ಜಿಲ್ಲಾಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾನೆ. ಪ್ರಸ್ತುತ, ಲಚ್ಯಾಣ ಗ್ರಾಮದ ಇಂಡಿ ತಾಲೂಕಿನಲ್ಲಿ ಗೌರವ, ಸನ್ಮಾನಗಳಿಂದ ಸ್ವಾಗಿತಿಸಲಾಗಿದೆ.
ಮಂಗಳ ಪುರಾಣ ಕಾರ್ಯಕ್ರಮ ಸಮಿತಿ ವತಿಯಿಂದ ಲಚ್ಯಾಣ ಗ್ರಾಮದ ಮಲ್ಲಯ್ಯನ ಗುಡಿ ಎದುರು ಬಾಲಕ ಸಾತ್ವಿಕ್ ಹಾಗೂ ಪೋಷಕರನ್ನ ಸ್ವಾಗತಿಸಿ, ಸನ್ಮಾನಿಸಲಾಯಿತು.
ಸತತ 20 ಗಂಟೆ ಕಾರ್ಯಾಚರಣೆ ನಡೆಸಿ ಸಾತ್ವಿಕ್ ಅನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿತ್ತು. 48 ಗಂಟೆಯ ಕಾಲ ಚಿಕಿತ್ಸೆ ನೀಡಿದ ಬಳಿಕ ವೈದ್ಯರು ನಿನ್ನೆಯಷ್ಟೇ ಲಚ್ಯಾಣ ಗ್ರಾಮಕ್ಕೆ ಕರೆತಂದು ಬಿಟ್ಟಿದ್ದಾರೆ. ಇದೀಗ ಸಾತ್ವಿಕ್ ಸಂಪೂರ್ಣ ಆರೋಗ್ಯವಾಗಿದ್ದಾನೆ.