ಯುದ್ದಪೀಡಿತ ಉಕ್ರೇನ್‌ ಗೆ 3000 ಕೋಟಿ ನೆರವು ಘೋಷಿಸಿದ ಸೌದಿ ಅರೇಬಿಯಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭೀಕರ ಯುದ್ಧದಿಂದ ನಲುಗಿರುವ ಉಕ್ರೇನ್‌ ಗೆ ಸೌದಿ ಅರೇಬಿಯಾ $400 ಮಿಲಿಯನ್ (ಅಂದಾಜು 3,200 ಕೋಟಿ) ಮಾನವೀಯ ನೆರವು ಘೋಷಿಸಿದೆ ಎಂದು ಎಸ್‌ ಪಿಎ ಸುದ್ದಿ ಸಂಸ್ಥೆ ವರದಿ ಮಾಡಿದೆ. ಜೊತೆಗೆ ಸೌದಿ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ದೂರವಾಣಿ ಕರೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಉಕ್ರೇನ್‌ ನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರುವ ಎಲ್ಲಾ ಪ್ರಯತ್ನಗಳನ್ನು ಹಾಗೂ ಮಧ್ಯಸ್ಥಿಕೆಯ ಪ್ರಯತ್ನಗಳನ್ನು ನಡೆಸಲು ನಾವು ಸಿದ್ಧರಿದ್ದೇವೆ ಎಂದು ಸಲ್ಮಾನ್‌ ಹೇಳಿದ್ದಾರೆ.
ಸೌದಿ ಅರೇಬಿಯಾ ಕಳೆದ ತಿಂಗಳು ಮಾಸ್ಕೋ ಮತ್ತು ಕೈವ್ ನಡುವೆ ಯುದ್ಧದ ಖೈದಿಗಳ ವಿನಿಮಯ ಪ್ರಕ್ರಿಯೆಯನ್ನು ಸುಗಮಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿತ್ತು. ಈ ನಡುವೆ ಉಕ್ರೇನ್‌ನಲ್ಲಿನಲ್ಲಿ ಸಾಗುತ್ತಿರುವ ಯುದ್ಧವು ಸೌದಿ ಅರೇಬಿಯಾ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ಉದ್ವಿಗ್ನತೆ ಮೂಡಿಸಿದೆ.
ಸಂಘರ್ಷದಿಂದ ಉಂಟಾಗಿರುವ ಶಕ್ತಿಯ ಬಿಕ್ಕಟ್ಟನ್ನು ಸರಾಗಗೊಳಿಸುವ ಸಲುವಾಗಿ ತೈಲ ಉತ್ಪಾದನೆಯನ್ನು ಹೆಚ್ಚಿಸುವ ಪ್ರಸ್ತಾಪವನ್ನು ಸೌದಿ ಖಂಡಾತುಂಡವಾಗಿ ವಿರೋಧಿಸಿತ್ತು.
ಸೌದಿ ನೇತೃತ್ವದ ತೈಲ ರಫ್ತುದಾರರ OPEC ಗುಂಪು ರಷ್ಯಾ ಮತ್ತು ಇತರ ಮಿತ್ರರಾಷ್ಟ್ರಗಳೊಂದಿಗೆ ತೈಲ ಉತ್ಪಾದನಾ ಕಡಿತಕ್ಕೆ ಒಪ್ಪಿಗೆ ನೀಡಿದ ನಂತರ ಸೌದಿ ವಿರುದ್ಧ ಅಮೆರಿಕಾ ಟೀಕ ಪ್ರಹಾರ ನಡೆಸಿತ್ತು. ಈ ಕ್ರಮ ಇಂಧನ ಬೆಲೆಗಳನ್ನು ಇನ್ನಷ್ಟು ಹೆಚ್ಚಿಸಬಹುದು ಎಂದು ಅಮೆರಿಕಾ ಖಂಡನೆ ವ್ಯಕ್ತಪಡಿಸಿದೆ. ಇದರ ಪರಿಣಾಮಗಳನ್ನು ಎದುರಿಸಬೇಕಾಗಬಹುದು ಎಂದು ಅಮೆರಿಕ ಅಧ್ಯಕ್ಷ ಅಧ್ಯಕ್ಷ ಜೋ ಬಿಡೆನ್ ಸೌದಿ ಅರೇಬಿಯಾಕ್ಕೆ ಎಚ್ಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!