ಸೌದಿ ಅರೇಬಿಯಾದಲ್ಲಿ ಪ್ರವಾಹ: ಗೊಂಬೆಗಳಂತೆ ತೇಲುತ್ತಿರುವ ಕಾರುಗಳು, ಇಬ್ಬರು ಮೃತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮರುಭೂಮಿ ದೇಶ ಸೌದಿ ಅರೇಬಿಯಾ ಪ್ರವಾಹದಿಂದ ತತ್ತರಿಸಿದೆ. ಸೌದಿ ಇತಿಹಾಸದಲ್ಲಿ ಅಭೂತಪೂರ್ವ ಮಳೆಯಿಂದಾಗಿ ಜೆಡ್ಡಾ ನಗರವು ನದಿಯಾಗಿ ಮಾರ್ಪಟ್ಟಿದೆ. ಪ್ರವಾಹದ ತೀವ್ರತೆಗೆ ಕಾರುಗಳೆಲ್ಲ ಕೊಚ್ಚಿ ಹೋಗುತ್ತಿವೆ. ಗುರುವಾರ (ನವೆಂಬರ್ 24, 2022) ಬೆಳಿಗ್ಗೆ ಎಂಟು ಗಂಟೆಯಿಂದ ಸಂಜೆ ಗುಡುಗು ಮಿಂಚು ಸಹಿತ 17.97 ಸೆಂ.ಮೀ ಮಳೆಯಾಗಿದೆ.

ಹಿಂದೆಂದೂ ಈ ಮಟ್ಟದ ಮಳೆಯನ್ನೇ ಕಂಡಿರದ ಸೌದಿ ಜನತೆ ಎಡೆಬಿಡದೆ ಸುರಿದ ಮಳೆಗೆ ಕಂಗಾಲಾಗಿದ್ದರು. ಸರ್ಕಾರ ಎಚ್ಚರಿಕೆಯಿಂದ ರಕ್ಷಣಾ ತಂಡಗಳನ್ನು ನಿಯೋಜಿಸಿದೆ. ಮಳೆ ಮತ್ತು ಪ್ರವಾಹದಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ವಾಹನಗಳಲ್ಲಿದ್ದ ಹಲವರು ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ.

ಈ ಹಿಂದೆ 2009 ಮತ್ತು 2011ರಲ್ಲಿ ಸೌದಿಯಲ್ಲಿ ಭಾರೀ ಮಳೆ ಸುರಿದಿತ್ತು. ಆದರೆ ಆಗ ಕೇವಲ 11.1, 9 ಸೆಂ.ಮೀ ಮಳೆಯಾಗಿತ್ತು. ಶಾಲೆಗಳನ್ನು ಮುಚ್ಚಲಾಗಿದ್ದು, ಮೆಕ್ಕಾಗೆ ಹೋಗುವ ರಸ್ತೆಯನ್ನು ರಸ್ತೆ ಕೂಡ ಕೆಲ ಕಾಲ ಬಂದ್‌ ಆಗಿತ್ತು. ನಂತರ ಪುನಃ ತೆರೆಯಲಾಯಿತು. ಜನರು ಜಾಗೃತರಾಗಬೇಕು ಯಾರೂ ಹೊರಗೆ ಬರಬಾರದು ಎಂದು ಸರ್ಕಾರ ಆದೇಶ ನೀಡಿದೆ. ಪ್ರವಾಹದಿಂದಾಗಿ ಕಿಂಗ್ ಅಬ್ದುಲ್ ಅಜೀಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳು ವಿಳಂಬವಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!