ನಮ್ಮನ್ನು ರಕ್ಷಿಸಿ…ಮೋದಿ ಸರ್ಕಾರಕ್ಕೆ ರಷ್ಯಾ ಸೇನೆಯಲ್ಲಿ ಸಿಲುಕಿರುವ ನೇಪಾಳಿಗರ ಮನವಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೇಪಾಳಿ ನಾಗರೀಕರು ಭಾರತಕ್ಕೆ ವಿಶೇಷ ಮನವಿಯೊಂದನ್ನು ಮಾಡಿದ್ದಾರೆ. ಭಾರತದ ರೀತಿಯಲ್ಲೇ ರಷ್ಯಾ ಸೇನೆಯಲ್ಲಿ ನೇಪಾಳದ ಹಲವರು ಸಿಲುಕಿಕೊಂಡಿದ್ದಾರೆ. ನಮ್ಮನ್ನು ರಕ್ಷಿಸಲು ನೇಪಾಳಕ್ಕೆ ಸಾಧ್ಯವಾಗುತ್ತಿಲ್ಲ. ಇದೀಗ ನಮಗೆ ಭಾರತ ಒಂದೇ ಆಸರೆ. ನಮ್ಮನ್ನೂ ರಕ್ಷಿಸಿ ಎಂದು ಭಾರತ ಸರ್ಕಾರಕ್ಕೆ ರಷ್ಯಾ ಸೇನೆಯಲ್ಲಿ ನೇಪಾಳಿಗರು ಮನವಿ ಮಾಡಿದ್ದಾರೆ.

ಕೆಲಸಕ್ಕಾಗಿ ರಷ್ಯಾಗೆ ತೆರಳಿದ ನೇಪಾಳಿಗರನ್ನು ರಷ್ಯಾ ಅಕ್ರಮವಾಗಿ ಯುದ್ಧಕ್ಕೆ ನಿಯೋಜನೆ ಮಾಡಿತ್ತು. ಉಕ್ರೇನ್ ಗಡಿ ಭಾಗಕ್ಕೆ ಕಳುಹಿಸಿತ್ತು. 30 ಮಂದಿಯಿಂದ ನೇಪಾಳಿಗರ ಪೈಕಿ ಇದೀಗ 5 ಮಂದಿ ಮಾತ್ರ ಉಳಿದುಕೊಂಡಿದ್ದಾರೆ. ಇನ್ನುಳಿದ 25 ಮಂದಿ ನೇಪಾಳಿಗರು ಗಡಿಯಲ್ಲೇ ಹುತಾತ್ಮರಾಗಿದ್ದಾರೆ. ಇದೀಗ ಈ ಐವರು ಭಾರತ ಸರ್ಕಾರವನ್ನು ಬೇಡಿಕೊಂಡಿದೆ. ನಮ್ಮನ್ನೂ ರಕ್ಷಿಸಿ ಎಂದು ಅಂಗಲಾಚಿದ್ದಾರೆ.ಈ ವಿಡಿಯೋ ವೈರಲ್ ಆಗಿದೆ.

ಮೋದಿ ಸರ್ಕಾರ ರಷ್ಯಾ ಸೇನೆಯಲ್ಲಿದ್ದ ಭಾರತೀಯರನ್ನು ರಕ್ಷಿಸಿದೆ. ಇದೇ ರೀತಿ ನಮ್ಮನ್ನು ರಕ್ಷಿಸಬೇಕು. ನೇಪಾಳ ಸರ್ಕಾರಕ್ಕೆ ನಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ. ಭಾರತ ವಿಶ್ವದ ಪ್ರಭಾವಿ ಹಾಗೂ ಶಕ್ತಿಶಾಲಿ ರಾಷ್ಟ್ರವಾಗಿದೆ. ಭಾರತ ಸರ್ಕಾರ ಮಧ್ಯಪ್ರವೇಶಿಸಿದರೆ ನಾವು ಇಲ್ಲಿಂದ ಮುಕ್ತಿ ಪಡೆಯಲು ಸಾಧ್ಯ. ನಾವು ಈ ಮೂಲಕ ಭಾರತ ಸರ್ಕಾರವನ್ನು ಕಳಕಳಿಯ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ರಷ್ಯಾ ಸೇನೆಯಲ್ಲಿರುವ ನೇಪಾಳಿಗರು ವಿಡಿಯೋ ಮೂಲಕ ಭಾರತಕ್ಕೆ ಮನವಿ ಮಾಡಿದ್ದಾರೆ.

ಎಜೆಂಟರು ನಮಗೆ ಮೋಸ ಮಾಡಿದ್ದಾರೆ. ರಷ್ಯಾ ಸೇನೆ ಸಹಾಯಕರಾಗಿ, ಆಹಾರ ಸಾಮಾಗ್ರಿ ಸ್ಟಾಕ್ ರೂಂಗಳಲ್ಲಿ ಸಹಾಯಕರಾಗಿ ಸೇರಿದಂತೆ ಇತರ ಕೆಲಸಗಳ ಆಫರ್ ನೀಡಿ ರಷ್ಯಾಗೆ ಕಳುಹಿಸಲಾಗಿತ್ತು. ಆದರೆ ರಷ್ಯಾ ಸೇನೆಗೆ ನಮ್ಮನ್ನು ನಿಯೋಜಿಸಿದ್ದಾರೆ ಅನ್ನೋದು ತಡವಾಗಿ ಬೆಳಕಿಗೆ ಬಂದಿತ್ತು. ಈ ಟ್ರೂಪ್‌ನಲ್ಲಿ 20 ನೇಪಾಳಿಗರಿದ್ದೇವು. ಇದೀಗ 5 ಮಂದ್ರಿ ಮಾತ್ರ ಉಳಿದುಕೊಂಡಿದ್ದೇವೆ. ನಾವು ಮನೆಗೆ ಹಿಂದಿರುಗಬೇಕು. ಹೇಗಾದರೂ ಮಾಡಿ ರಕ್ಷಿಸಿ ಎಂದು ಭಾರತಕ್ಕೆ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!