February 24, 2026
Tuesday, February 24, 2026
spot_img

ಕಟುಕರ ಕೈಯಿಂದ ಕಾಮಧೇನುಗಳ ರಕ್ಷಣೆ: ಗೋರಕ್ಷಕರ ಜಾಗೃತಿಯಿಂದ ತಪ್ಪಿದ ದುರಂತ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇದನ್ನೂ ಓದಿ:

ಹೈದರಾಬಾದ್‌ನಿಂದ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಸುಮಾರು 70ಕ್ಕೂ ಹೆಚ್ಚು ಗೋವುಗಳನ್ನು ಮುಳಬಾಗಿಲು ತಾಲೂಕಿನ ಹನುಮನಹಳ್ಳಿ ಟೋಲ್ ಬಳಿ ಗೋರಕ್ಷಕರು ಪತ್ತೆ ಹಚ್ಚಿ ರಕ್ಷಿಸಿದ್ದಾರೆ. ಇಂದು ಸಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.

ಬೆಂಗಳೂರಿನ ಕಸಾಯಿಖಾನೆಗೆ ಅತ್ಯಂತ ಕ್ರೂರವಾಗಿ ಕಂಟೇನರ್‌ನಲ್ಲಿ ಗೋವುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಗೋರಕ್ಷಕ ದಳ ಹಾಗೂ ಭಜರಂಗದಳದ ಕಾರ್ಯಕರ್ತರು ಜಂಟಿ ಕಾರ್ಯಾಚರಣೆ ನಡೆಸಿದರು. ಗಾಳಿ, ಬೆಳಕು ಹಾಗೂ ಕನಿಷ್ಠ ಆಹಾರ-ನೀರಿಲ್ಲದ ಮುಚ್ಚಿದ ಕಂಟೇನರ್‌ನಲ್ಲಿ ಹಸುಗಳನ್ನು ಅಮಾನವೀಯವಾಗಿ ತುರುಕಲಾಗಿತ್ತು.

ದೀರ್ಘ ಪ್ರಯಾಣದ ಆಯಾಸ ಮತ್ತು ಉಸಿರುಗಟ್ಟಿಸುವ ವಾತಾವರಣದಿಂದಾಗಿ ಕೆಲವು ಹಸುಗಳು ಕಂಟೇನರ್‌ನಲ್ಲೇ ಪ್ರಾಣಬಿಟ್ಟಿರುವ ಶಂಕೆ ವ್ಯಕ್ತವಾಗಿದೆ. ಕಂಟೇನರ್ ಬಾಗಿಲು ತೆರೆದಾಗ ಕಂಡುಬಂದ ಗೋವುಗಳ ದಯನೀಯ ಸ್ಥಿತಿ ಕಂಡು ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !