ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೋಳಿ ಹಬ್ಬದಂದು ಅಂಗಡಿಗಳಲ್ಲಿ ತರಾವರಿ ಬಣ್ಣ ಸಿಗತ್ತೆ. ಆದರೆ ಈ ಬಣ್ಣಗಳಲ್ಲಿ ಕೆಮಿಕಲ್ ಹಾಕಿರ್ತಾರೆ, ಅದು ಸ್ಕಿನ್‌ಗೆ ಡೇಂಜರ್ ಆಗಬಹುದು. ಅದಕ್ಕಾಗಿ ಮನೆಯಲ್ಲೇ ನ್ಯಾಚುರಲ್ ಕಲರ್ ಹೇಗೆ ಮಾಡೋದು ಅಂತ ನೋಡೋಣ…
ಪಿಂಕ್ ಕಲರ್
ಪಿಂಕ್ ಕಲರ್ ಮಾಡಬೇಕು ಅಂದ್ರೆ, ಒಂದು ಬೀಟ್ರೂಟ್ ತಗೊಂಡು ಚನ್ನಾಗಿ ತುರಿದು ಒಂದು ಕಪ್ ನೀರಲ್ಲಿ ಹಾಕಿ ಕುದಿಸಿ. ಈಗ ಒಂದು ಬಟ್ಟಲಲ್ಲಿ ಕಾರ್ನ್ ಫ್ಲೋರ್ ಹಾಕಿ, ಅದಕ್ಕೆ ಬೀಟ್ರೂಟ್ ರಸ ಹಾಕಿ. ಇದನ್ನ ಒಂದು ಗಂಟೆಯಿಂದ ಎರಡು ಗಂಟೆಗಳ ಕಾಲ ಒಣಗಲು ಬಿಡಿ, ಆಮೇಲೆ ಪೌಡರ್ ಮಾಡಿ ಜರಡಿ ಮಾಡಿದರೆ ಪಿಂಕ್ ಕಲರ್ ರೆಡಿ.
ಗ್ರೀನ್ ಕಲರ್
ಕಲರ್ ಮಾಡೋಕೆ ಪಾಲಕ್ ಸೊಪ್ಪನ್ನ ಬಳಸಬಹುದು. ಪಾಲಕ್ ಸೊಪ್ಪನ್ನ ಚೆನ್ನಾಗಿ ತೊಳೆದು ನೀರಿನಲ್ಲಿ ಸ್ವಲ್ಪ ಬೇಯಿಸಿ. ನಂತರ ಪಾಲಕ್ ಕಲರ್ ನೀರಿಗೆ ಬಂದ್ಮೇಲೆ, ಸ್ಟವ್ ಆಫ್ ಮಾಡಿ, ಒಂದು ಬಟ್ಟಲಲ್ಲಿ ಕಾರ್ನ್ ಫ್ಲೋರ್ ಹಾಕಿ ಮಿಕ್ಸ್ ಮಾಡಿ ಒಣಗಲು ಬಿಡಿ. ಪೌಡರ್ ಚೆನ್ನಾಗಿ ಒಣಗಿದ ಮೇಲೆ ಅದನ್ನ ಜರಡಿ ಹಿಡಿಯಿರಿ.
ಯಲ್ಲೋ ಕಲರ್
ಒಂದು ಗ್ಲಾಸ್ ನೀರಿಗೆ ಎರಡು ಚಮಚ ಅರಿಶಿನ ಹಾಕಿ ಚೆನ್ನಾಗಿ ಕುದಿಸಿ. ಈಗ ಒಂದು ಬಟ್ಟಲಲ್ಲಿ ಕಾರ್ನ್ ಸ್ಟಾರ್ಚ್ ಹಾಕಿ, ಅದಕ್ಕೆ ಅರಿಶಿನ ನೀರನ್ನ ಸೋಸಿ ಹಾಕಿ ಮಿಕ್ಸ್ ಮಾಡಿ ಒಣಗಲು ಬಿಡಿ. ಇದು ಗಟ್ಟಿಯಾದ ಮೇಲೆ ಪೌಡರ್ ಮಾಡಿ ಜರಡಿ ಹಿಡಿಯಿರಿ.
ಈ ರೀತಿಯಾಗಿ ಆರ್ಗ್ಯಾನಿಕ್ ಕಲರ್ ಮಾಡೋದನ್ನ ಇನ್ಸ್ಟಾಗ್ರಾಮ್ನಲ್ಲಿ bankebihariji_fanclub ಅನ್ನೋ ಪೇಜ್ನಲ್ಲಿ DIY ಹೋಳಿ ಕಲರ್ ವಿಡಿಯೋ ಶೇರ್ ಮಾಡಿದ್ದಾರೆ. ಇದು ಸಧ್ಯ ಟ್ರೆಂಡ್ ಆಗ್ತಿದೆ.
View this post on Instagram