ಎಸ್‌ಬಿಐ ಸರ್ವರ್ ಡೌನ್:‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗ್ತಿವೆ ಮೀಮ್ಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜನರು ಯಾವುದೇ ಸಮಸ್ಯೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ವೈರಲ್ ಮಾಡುವುದು ಸರ್ವೆ ಸಾಮಾನ್ಯವಾಗಿದೆ. ಬ್ಯಾಕಿಂಗ್ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ಗ್ರಾಹಕರು ಶಾಂತವಾಗಿರುತ್ತಾರೆಯೇ? ಇದೀಗ ಎಸ್‌ಬಿಐ ಸರ್ವರ್ ಅಸಮರ್ಪಕವಾಗಿ ಆನ್‌ಲೈನ್ ಸೇವೆಗಳು ಸ್ಥಗಿತಗೊಂಡಿದ್ದರಿಂದ ಗ್ರಾಹಕರು ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಮೀಮ್‌ಗಳು ಮತ್ತು ಜೋಕ್‌ಗಳನ್ನು ಪೋಸ್ಟ್ ಮಾಡಿದ್ದು, ಇದೀಗ ಅವು ವೈರಲ್ ಆಗುತ್ತಿದೆ.

ಸೋಮವಾರ ಎಸ್ಬಿಐನ ಸರ್ವರ್ ಸರಿಯಾಗಿ ಕಾರ್ಯನಿರ್ವಹಿಸದೇ ಗ್ರಾಹಕರು ತೀವ್ರ ತೊಂದರೆ ಅನುಭವಿಸಿದರು. ಬ್ಯಾಂಕ್ EMI ಗಳು ಮತ್ತು ಕ್ರೆಡಿಟ್ ಕಾರ್ಡ್ ಪಾವತಿಗಳನ್ನು ಮಾಡುವುದು ಕಷ್ಟವಾಯಿತು. ಬೆಳಗ್ಗೆಯಿಂದ ನೆಟ್ ಬ್ಯಾಂಕಿಂಗ್, UPI ಮತ್ತು YONO ಆಪ್ ಕಾರ್ಯನಿರ್ವಹಿಸದ ಕಾರಣ ಗ್ರಾಹಕರು ಕಂಗಾಲಾಗಿದ್ದಾರೆ. ಇದರಿಂದಾಗಿ ತಾವು ಮಾಡಬೇಕಾಗಿದ್ದ ಹಣ ಪಾವತಿ ಸ್ಥಗಿತಗೊಂಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಟ್ವಿಟ್ಟರ್‌ ವೇದಿಕೆಯಾಗಿ ಗ್ರಾಹಕರು ಮಾಡಿದ ಜೋಕ್‌ಗಳು ಮತ್ತು ಮೀಮ್‌ಗಳು ಈಗ ವೈರಲ್ ಆಗಿವೆ.

ಆ ಕಂಪನಿಯ ತಾಂತ್ರಿಕ ಉದ್ಯೋಗಿಗಳು ಊಟ ಮಾಡುವುದರಲ್ಲಿ ಬ್ಯುಸಿಯಾಗಿರಬೇಕು ಎಂದು ಅವರು ಟ್ವಿಟರ್‌ನಲ್ಲಿ ತಮಾಷೆಯ ಪೋಸ್ಟ್‌ಗಳನ್ನು ಮಾಡಿದ್ದಾರೆ. ಮೂರು ದಿನಗಳಿಂದ ಸರ್ವರ್ ಕೆಲಸ ಮಾಡದೇ ಇರುವಾಗ ಕಂಪನಿ ಏನು ಮಾಡುತ್ತಿದೆ ಎಂದು ಕೆಲವರು ಪ್ರಶ್ನಿಸಿದರು.

ಏಪ್ರಿಲ್ 3 ರಂದು ಬೆಳಿಗ್ಗೆ 9.19 ಕ್ಕೆ ಸಮಸ್ಯೆ ಪ್ರಾರಂಭವಾಯಿತು ಸೋಮವಾರವೂ ಮುಂದುವರೆದಿದೆ ಎಂದು ಗ್ರಾಹಕರು ಕಿಡಿ ಕಾಡಿದ್ದಾರೆ. ಕಾರಣಗಳು ಏನೇ ಇರಲಿ, ಕಳೆದ ಮೂರು ದಿನಗಳಿಂದ ಆನ್‌ಲೈನ್ ಪಾವತಿ ಸ್ಥಗಿತಗೊಂಡಿದ್ದರಿಂದ ಗ್ರಾಹಕರು ತೀವ್ರ ತೊಂದರೆ ಅನುಭವಿಸಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!