2 ಸಾವಿರ ಉದ್ಯೋಗ ಕಡಿತಕ್ಕೆ ವಾಲ್‌ಮಾರ್ಟ್‌ ಚಿಂತನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅಮೆರಿಕ ಮೂಲದ ಬಹುರಾಷ್ಟ್ರೀಯ ವ್ಯಾಪಾರ ಸಂಸ್ಥೆ ವಾಲ್‌ ಮಾರ್ಟ್‌ ತನ್ನ ಇ-ಕಾಮರ್ಸ್‌ ಗೋದಾಮುಗಳಲ್ಲಿ 2,000ಕ್ಕೂ ಹೆಚ್ಚು ಉದ್ಯೋಗಗಳನ್ನು ಕಡಿತಗೊಳಿಸಲಿದೆ ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ.

ಲಭ್ಯವಿರೋ ಮಾಹಿತಿಯ ಪ್ರಕಾರ ವಜಾಗೊಳಿಸುವಿಕೆಯು ಟೆಕ್ಸಾಸ್‌ನ ಫೋರ್ಟ್ ವರ್ತ್‌ನಲ್ಲಿರುವ ವೇರ್‌ಹೌಸ್‌ನಲ್ಲಿ 1,000 ಕ್ಕೂ ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. ಇದಲ್ಲದೇ ಪೆನ್ಸಿಲ್ವೇನಿಯಾದಲ್ಲಿ 400, ಫುಲ್‌ಮೆಂಟ್ ಸೆಂಟರ್‌ನಲ್ಲಿ 600 ಉದ್ಯೋಗಿಗಳು ಮತ್ತು ನ್ಯೂಜೆರ್ಸಿಯಲ್ಲಿ 200 ಮಂದಿ ತಮ್ಮ ಉದ್ಯೋಗ ಕಳೆದು ಕೊಳ್ಳಲಿದ್ದಾರೆ ಎನ್ನಲಾಗಿದೆ.

ವಾಲ್‌ಮಾರ್ಟ್‌ ಹೆಚ್ಚಿನ ಆನ್‌ಲೈನ್‌ ಆರ್ಡರ್‌ ಗಳನ್ನು ನಿರ್ವಹಿಸಲು ತನ್ನ ಸ್ಟೋರ್‌ಗಳನ್ನು ಹಾಗು ಪೂರೈಸುವ ಕೇಂದ್ರಗಳನ್ನು ಮರುಹೊಂದಿಸುತ್ತಿದೆ. ಇದರಿಂದಾಗಿ ಕೆಲ ಉದ್ಯೋಗಿಗಳು ಉದ್ಯೋಗದಿಂದ ವಂಚಿತರಾಗಲಿದ್ದು ಇನ್ನೂ ಕೆಲವರು ಬದಲೀ ಉದ್ಯೋಗ ಪಡೆಯಬಹುದು ಎಂದು ಮೂಲಗಳ ವರದಿ ಉಲ್ಲೇಖಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!