ಸಿಇಒಗಳ ಹೆಸರಲ್ಲಿ ಸ್ಟಾರ್ಟಪ್‌ ಉದ್ಯೋಗಿಗಳ ಹಣ ದೋಚುತ್ತಿದ್ದಾರೆ ಖದೀಮರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಸಿಮ್ ಕಾರ್ಡ್‌ಗಳಿಂದ ಹಿಡಿದು ಗ್ರಾಹಕ ಸೇವೆಯವರೆಗೆ, ಜನರನ್ನು ಮೋಸದ ಬಲೆಗೆ ಬೀಳಿಸುವ ಖದೀಮರ ಜಾಲ ನಾನಾ ಹೆಸರಲ್ಲಿ ಕಾರ್ಯನಿರ್ವಹಿಸುತ್ತಿದೆ. ಹಣಕಾಸು ಕ್ಷೇತ್ರವು ಡಿಜಿಟಲ್‌ ಆಗಿ ಪರಿವರ್ತನೆಯಾದಂತೆಲ್ಲಾ ಈ ರೀತಿಯ ಮೋಸದ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಇದೀಗ ಈ ರೀತಿ ಮೋಸ ಮಾಡುವ ಖದೀಮರು ಒಂದು ಹೆಜ್ಜೆ ಮುಂದೆ ಹೋಗಿ ಸ್ಟಾರ್ಟಪ್‌ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಅವರಿಂದ ಹಣದೋಚುವ ಹುನ್ನಾರ ನಡೆಸುತ್ತಿದ್ದಾರೆ.

ಕಂಪನಿಗಳ ಸಿಇಒ ಗಳ ಹೆಸರಿನಲ್ಲಿ ಉದ್ಯೋಗಿಗಳಿಗೆ ಮೆಸೆಜ್‌ ಮಾಡುವ ಮೂಲಕವೋ ಅಥವಾ ಬೇರೆಯ ರೀತಿಯಲ್ಲಿ ಸಂಪರ್ಕಿಸಿ ಅವರಿಂದ ಹಣ ಪಾವತಿ ಮಾಡಿಸಿಕೊಳ್ಳುವ ಮೂಲಕ ಹಣ ದೋಚುವ ವ್ಯವಸ್ಥಿತ ಜಾಲ ಕಾರ್ಯನಿರ್ವಹಿಸುತ್ತಿರುವುದು ಈಗ ಬೆಳಕಿಗೆ ಬಂದಿದೆ.

ಇತ್ತೀಚಿಗೆ ಮೀಶೋ ಉದ್ಯೋಗಿ ಶಿಖರ್ ಸಕ್ಸೇನಾ ಅವರು ಮೀಶೋ ಸಿಇಒ ವಿದಿತ್ ಆತ್ರೆ ಎಂಬ ಹೆಸರಿನಲ್ಲಿ ಮೋಸಗಾರರಿಂದ ಸಂದೇಶವನ್ನು ಸ್ವೀಕರಿಸಿದ ಘಟನೆಯನ್ನು ಹಂಚಿಕೊಂಡಿದ್ದಾರೆ. ಕೆಲವು ತುರ್ತು ಪಾವತಿಗಳನ್ನು ಮಾಡುವಂತೆ ಖದೀಮರು ಸಿಇಒ ಹೆಸರಲ್ಲಿ ಶಿಖರ್ ಅವರ ಬಳಿ ಕೇಳಿದ್ದಾರೆ. ‘ಸ್ಟಾರ್ಟ್‌ಅಪ್ ಜಗತ್ತಿನಲ್ಲಿ ಇತ್ತೀಚಿನ ಹಗರಣ – ಸಿಇಒ ಅವರಿಂದ ಸಂದೇಶ’ ಎಂದು ಶಿಖರ್ ಶರ್ಮಾ ಸ್ಕ್ಯಾಮರ್‌ನೊಂದಿಗಿನ ಸಂಭಾಷಣೆಯ ಸ್ಕ್ರೀನ್‌ಶಾಟ್ ಅನ್ನು ಟ್ವೀಟ್‌ ಮಾಡಿದ್ದಾರೆ. ಸಿಇಒ ಹೆಸರಲ್ಲಿ ಸಂಪರ್ಕಿಸಿದ ವ್ಯಕ್ತಿಯು ತಾನು ಕಾನ್ಫರೆನ್ಸ್‌ ನಲಿರುವುದರಿಂದ ತುರ್ತಾಗಿ ಪೆಟಿಎಂ ಮೂಲಕ ಹಣ ಪಾವತಿಸಬೇಕೆಂದು, ನಂತರದಲ್ಲಿ ಹಣ ವಾಪಸ್ಸಾಗುತ್ತದೆ ಎಂದೂ ಸಂದೇಶ ಕಳಿಸಿರುವುದು ಸ್ಕ್ರೀನ್‌ ಶಾಟ್‌ ನಲ್ಲಿ ಕಾಣಸಿಗುತ್ತದೆ.

ಈ ಘಟನೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ಕೂಡಲೇ, ಇನ್ನೂ ಹಲವಾರು ಜನರು ತಮ್ಮೊಂದಿಗೆ ಇದೇ ರೀತಿಯ ಘಟನೆ ನಡೆದಿರುವುದಾಗಿ ಹಂಚಿಕೊಂಡಿದ್ದು ಸ್ಕ್ಯಾಮರ್‌ಗಳ ವ್ಯವಸ್ಥಿತ ಜಾಲದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!