ಶಾಲಾಮಕ್ಕಳಿಂದ ತಮ್ಮ ಮನೆಯ ಶೌಚಾಲಯ ಕ್ಲೀನಿಂಗ್? ಶಿಕ್ಷಕಿ ವಿರುದ್ಧ ಪೋಷಕರ ಗಂಭೀರ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸರ್ಕಾರಿ ಶಾಲಾ ಮಕ್ಕಳಿಂದ ಶಾಲೆಯ ಶೌಚಾಲಯ ತೊಳೆಸಿದ್ದಕ್ಕೆ ರಾಜ್ಯಾದ್ಯಂತ ಸಾಕಷ್ಟು ಮುಖ್ಯೋಪಾಧ್ಯಾಯರು ಅಮಾತನಾತಾಗಿದ್ದಾರೆ. ಶಾಲೆಯ ಮಕ್ಕಳಿಂದ ಈ ಕೆಲಸಗಳನ್ನು ಮಾಡಿಸದಂತೆ ಖಡಕ್ ಸೂಚನೆ ನೀಡಲಾಗಿದೆ.

ಇದೀಗ ಕಲಬುರಗಿಯಲ್ಲಿ ಶಾಲಾ ಶಿಕ್ಷಕಿಯೊಬ್ಬರು ಮಕ್ಕಳಿಂದ ಶಾಲೆಯ ಟಾಯ್ಲೆಟ್ ಜೊತೆ ತಮ್ಮ ಮನೆಯ ಟಾಯ್ಲೆಟ್‌ನ್ನೂ ಕ್ಲೀನ್ ಮಾಡಿಸಿದ ಆರೋಪ ಎದುರಾಗಿದೆ.

ಕಲಬುರಗಿಯ ಮಾಲಗತ್ತಿ ಗ್ರಾಮದ ಶಾಲೆಯೊಂದರಲ್ಲಿ ಘಟನೆ ನಡೆದಿದೆ. ಎಂಟನೇ ತರಗತಿ ವಿದ್ಯಾರ್ಥಿಯಿಂದ ಮನೆಕೆಲಸವನ್ನು ಶಿಕ್ಷಕರು ಮಾಡಿಸಿಕೊಂಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಶಿಕ್ಷಕಿಯೊಬ್ಬರು ಕಳೆದ ಕೆಲವು ತಿಂಗಳಿನಿಂದ ಶಾಲೆಯ ಸ್ವಚ್ಛತೆ, ತಮ್ಮ ಮನೆಯ ಗಾರ್ಡನ್ ಕ್ಲೀನಿಂಗ್‌ನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಕೆಲಸ ಮಾಡುವುದಿಲ್ಲ ಎಂದ ಮಕ್ಕಳಿಗೆ ಹೊಡೆದಿದ್ದಾರೆ ಅಷ್ಟೇ ಅಲ್ಲದೆ ಬೆತ್ತಲೆಗೊಳಿಸುವ ಧಮ್ಕಿ ಹಾಕಿದ್ದಾರೆ ಎಂದು ಪೋಷಕರು ಹೇಳಿದ್ದಾರೆ.

ಶನಿವಾರ ಮಧ್ಯಾಹ್ನ ಎರಡು ಗಂಟೆಯಾದ್ರೂ ಮಗ ಮನೆಗೆ ಬಂದಿಲ್ಲ ಎಂದು ಪೋಷಕರು ಶಾಲೆಗೆ ಕರೆ ಮಾಡಿದ್ದಾರೆ. ಮಗನನ್ನು ಶಿಕ್ಷಕಿ ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ಪೊಲೀಸರ ಸಹಾಯದಿಂದ ಮಗನನ್ನು ಮನೆಗೆ ಕರೆದುಕೊಂಡು ಬಂದಿದ್ದೇವೆ ಎಂದು ಪೋಷಕರು ಹೇಳಿದ್ದಾರೆ.

ಈ ಬಗ್ಗೆ ತನಿಖೆ ನಡೆಯುತ್ತಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!