ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲಾ ವಿದ್ಯಾರ್ಥಿನಿಯೊಬ್ಬಳು ತನ್ನ ಬಾಕ್ಸ್‌ನಲ್ಲಿದ್ದ ಊಟವನ್ನು ಹಸಿದಿದ್ದ ವ್ಯಕ್ತಿಗೆ ನೀಡಿರುವ ವಿಡಿಯೋ ವೈರಲ್ ಆಗಿದೆ. ಮಗುವಿನ ಕರುಣೆಗೆ ನೆಟ್ಟಿಗರು ಮನಸೋತಿದ್ದು ಶಹಬ್ಬಾಸ್ ಸುರಿಮಳೆ ಹರಿಸುತ್ತಿದ್ದಾರೆ.
ವಿವಿಧ ಭಾವನೆಗಳಿಂದ ತುಂಬಿದ ವೀಡಿಯೊಗಳು ಪ್ರತಿದಿನ ಅಂತರ್ಜಾಲದಲ್ಲಿ ವೈರಲ್ ಆಗುತ್ತವೆ. queen_of_valley ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೊ ಎಲ್ಲರ ಹೃದಯವನ್ನು ಕದಲಿಸಿದೆ. ವೀಡಿಯೋದಲ್ಲಿ ಶಾಲಾ ವಿದ್ಯಾರ್ಥಿಯೊಬ್ಬಳು ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಗೆ ಮೊದಲು ಹಣ ಕೊಟ್ಟು, ನಂತರ ತನ್ನ ಬಾಕ್ಸ್‌ನಲ್ಲಿದ್ದ ಆಹಾರವನ್ನು ಆತನಿಗೆ ತಿನಿಸಿರುವ ದೃಶ್ಯ ಎಂತವರ ಮನಸನ್ನೂ ಕದಲಿಸುತ್ತಿದೆ.
ಮಗುವಿನ ಕೆಲಸಕ್ಕೆ ಆಕೆಯ ತಾಯಿಗೂ ಪ್ರಶಂಸೆಯ ಸುರಿಮಳೆ ಹರಿಯುತ್ತಿದೆ. ಮಗಳಿಗೆ ಒಳ್ಳೆಯ ಸಂಸ್ಕಾರವನ್ನು ಹೇಳಿಕೊಟ್ಟಿದ್ದಾರೆಂದು. ಈ ವಿಡಿಯೋ ನೋಡುತ್ತಿದ್ದರೆ, ದೇವರೇ ಮಗುವಿನ ಮೂಲಕ ಆತನಿಗೆ ಊಟ ಕೊಟ್ಟಂತಿದೆ ಎಂಬ ಕಮೆಂಟ್‌ಗಳು ಹರಿದಾಡುತ್ತಿವೆ.