ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೌರಮಂಡಲ, ನೀರಿನ ಶುದ್ಧೀಕರಣ, ಗ್ರೀನ್ ಹೌಸ್ ಎಫೆಕ್ಟ್, ವಾಲ್ಕೆನೋ, ವಾಯು ಮಾಲೀನ್ಯ..
ಎಲ್ಲರಿಗೂ ತಮ್ಮ ಶಾಲಾ ದಿನಗಳ ನೆನಪಾಗಿರಬಹುದು. ಬಹಳ ದಿನಗಳಿಂದ ಕಾದು ಕುಳಿತು ಮಾಡೆಲ್ ತಯಾರಿಸಿ ಶಾಲೆಯಲ್ಲಿ ಸೈನ್ಸ್ ಎಕ್ಸಿಬಿಶನ್ ಮಾಡಲಾಗುತ್ತದೆ. ಇದು ಬರೀ ಖಾಸಗಿ ಶಾಲೆಗಳಿಗೆ ಮಾತ್ರ ಸೀಮಿತವಲ್ಲ.
ಬೆಂಗಳೂರು ಪೂರ್ವದಲ್ಲಿರುವ ಬಿದರಹಳ್ಳಿಯ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಮಕ್ಕಳಿಂದ ವಿಜ್ಞಾನಕ್ಕೆ ಸಂಬಂಧಿಸಿದ ಮಾಡೆಲ್‌ಗಳನ್ನು ತಯಾರಿಸಿ, ಅವುಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗಿದೆ.
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಹಾಗೂ ವೈಚಾರಿಕತೆ ಮೂಡಿಸಲು ವಿಜ್ಞಾನ ಪ್ರಯೋಗ ಮಾಡಿಸಲಾಗಿದೆ. ಮಕ್ಕಳ ಪೋಷಕರು, ಸಾರ್ವಜನಿಕರಿಗೆ ಪ್ರವೇಶ ನೀಡಲಾಗಿದ್ದು, ಮಕ್ಕಳು ತಮ್ಮ ತಮ್ಮ ಪ್ರಾಜೆಕ್ಟ್‌ಗಳ ಬಗ್ಗೆ ತಮ್ಮದೇ ರೀತಿಯಲ್ಲಿ ಮಕ್ಕಳು ಅರಿವು ನೀಡುತ್ತಾರೆ.
ಕಾರ್ಯಕ್ರಮದಲ್ಲಿ ಸಿಆರ್‌ಪಿ ವಿಜಯಲಕ್ಷ್ಮಿ, ಮುಖ್ಯಶಿಕ್ಷಕಿ ಸುಬ್ಬಮ್ಮ ಹಾಗೂ ಸಹಶಿಕ್ಷಕರು ಭಾಗಿಯಾಗಿದ್ದರು.