HEALTH| ಹಾರರ್ ಸಿನಿಮಾ ಫ್ಯಾನ್ಸ್‌ಗೆ ಸಿಹಿಸುದ್ದಿ: ಟೈಮ್‌ಪಾಸ್‌ಗೆ ನೋಡಿದ್ರೆ ಆರೋಗ್ಯಕ್ಕೂ ಇದೆಯಂತೆ ಲಾಭ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಬ್ಬಾ..ಹಾರರ್‌ ಸಿನಿಮಾನಾ? ನಾನು ನೋಡೋದಿಲ್ಲ ಎಂದು ಹಿಂಜರಿಯುವವರೇ ಹೆಚ್ಚು. ಕೆಲವೊಬ್ಬರು ನೋಡಲು ಉತ್ಸುಕರಾಗಿದ್ದರೂ ಕೂಡ ಸಿನಿಮಾ ನೋಡುತ್ತಿದ್ದಂತೆ ಭಯದಿಂದ ಕಾಲ್ಕಿಳುವವರೂ ಇರುತ್ತಾರೆ. ಆದರೆ, ನಿಮಗೊಂದು ಸತ್ಯ ಹೇಳೋದಾದರೆ ಈ ಹಾರರ್‌ ಸಿನಿಮಾ ವೀಕ್ಷಣೆಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆಯಂತೆ. ಅವು ಯಾವುವು ಎಂದು ನೋಡೋಣ.

ತೂಕ ನಷ್ಟಕ್ಕೆ ಸಹಾಯ: ಸಣ್ಣ ಆಗಬೇಕೆಂದು ಬಯಸುವವರಿಗೆ ಇದೊಂದು ಸುಲಭದ ಮಾರ್ಗ. 90 ನಿಮಿಷಗಳ ಹಾರರ್ ಚಲನಚಿತ್ರವನ್ನು ನೋಡುವುದರಿಂದ ಯಾವುದೇ ದೈಹಿಕ ಚಟುವಟಿಕೆಯಿಲ್ಲದೆ ಸುಮಾರು 200 ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆಯಂತೆ. ಸಿನಿಮಾ ನೋಡುವಾಗ ಭಯವಾದರೂ..ನಂತರ ಆತಂಕ ಮತ್ತು ಖಿನ್ನತೆಯು ಕಡಿಮೆಯಾಗುತ್ತದೆ. ಮೂಡ್ ಸುಧಾರಿಸಲು ಭಯಾನಕ ಚಲನಚಿತ್ರಗಳು ತುಂಬಾ ಉಪಯುಕ್ತವಾಗಿವೆ.

ಬಿಳಿ ರಕ್ತ ಕಣಗಳ ಏರಿಕೆ: ಭಯಾನಕ ಚಲನಚಿತ್ರವನ್ನು ನೋಡುವಾಗ ರಕ್ತದಲ್ಲಿ ಬಿಳಿ ರಕ್ತ ಕಣಗಳು ಹೆಚ್ಚಾಗುತ್ತವೆ. ಇದು ಕಡಿಮೆ ಸಮಯದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾರರ್‌ ಸಿನಿಮಾ ವೀಕ್ಷಿಸುವಾಗ ನ್ಯೂರೋಟ್ರಾನ್ಸ್ಮಿಟರ್ಗಳು ಬಿಡುಗಡೆಯಾಗುತ್ತವೆ. ಇವು ಮೆದುಳು ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತವೆಯೆಂದು ಕೆಲ ಅಧ್ಯಯನಗಳು ತೋರಿಸಿವೆ.

ಭಯ ದೂರ: ಸದಾ ಭಯದಿಂದ ಕೂಡಿರುವವರು ಒಂದೆರೆಡು ಬಾರಿ ಹಾರರ್‌ ಸಿನಿಮಾ ನೋಡದರೆ ಭಯ ದೂರವಾಗಿ ಎಲ್ಲವನ್ನೂ ಎದುರಿಸುವ ಧೈರ್ಯ ಬರುತ್ತದೆ. ಅಪಾಯಕಾರಿ ಪರಿಸ್ಥಿತಿಯಲ್ಲಿ ಧೈರ್ಯಶಾಲಿಯಾಗಿರುವಂತೆ ಪ್ರೇರೇಪಿಸುತ್ತವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!