ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿನ ದಿನಗಳಲ್ಲಿ ಮಕ್ಕಳ ರಿಯಾಲಿಟಿ ಶೋಗಳು ಹೆಚ್ಚಾಗಿದೆ. ಮಕ್ಕಳನ್ನು ಜನಪ್ರಿಯತೆಯ ಅಟ್ಟಕ್ಕೆ ಏರಿಸುವಾಗ ಎಲ್ಲರೂ ಚಪ್ಪಾಳೆ ತಟ್ಟುತ್ತಾರೆ, ಆದರೆ ಜನಪ್ರಿಯತೆ ಕುಗ್ಗಿದ ಮೇಲೆ ಅವರ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದರ ಬಗ್ಗೆ ಯಾರಾದರೂ ಯೋಚಿಸಿದ್ದೀರಾ ಎಂದು ನಟಿ ಮಾಳವಿಕಾ ಅವಿನಾಶ್ ಹೇಳಿದ್ದಾರೆ.
ನಾನು ಕೂಡ ಬಾಲ ಕಲಾವಿದೆ ಆದರೆ ಹೆಚ್ಚು ಫೇಮಸ್ ಆಗಿಲ್ಲ, ಮಕ್ಕಳಿಗೆ ಸಿಗುವ ಎಕ್ಸ್‌ಪೋಶರ್‌ನ್ನು ಯಾವಾಗ ನಿಲ್ಲಿಸಬೇಕು ಎನ್ನುವುದು ಗೊತ್ತಿರಬೇಕು, ಮಗು ಯಾವತ್ತು ತನ್ನನ್ನು ತಾನು ಸ್ಟಾರ್ ಎಂದು ತಿಳಿದುಕೊಳ್ಳುತ್ತದೆಯೋ ಅಂದು ಮಗುವನ್ನು ಫೀಲ್ಡ್‌ನಿಂದ ಹೊರತನ್ನಿ. ಮಕ್ಕಳು ಫೇಮಸ್ ಆಗ್ತಾರೆ, ಆದರೆ ಸ್ವಲ್ಪ ದಿನಕ್ಕೆ ಎಲ್ಲರೂ ಅವರನ್ನು ಮರೆತುಹೋಗ್ತಾರೆ. ಆಗ ಮಕ್ಕಳ ಮನಸಿನಲ್ಲಿ ಯಾವ ರೀತಿ ಭಾವನೆಗಳು ಮೂಡುತ್ತವೆ ಎನ್ನುವುದರ ಬಗ್ಗೆ ಪೋಷಕರು ಗಮನ ಇಡಬೇಕು ಎಂದಿದ್ದಾರೆ.