ತಿಮಿಂಗಿಲದ ವಾಂತಿ ಲಭ್ಯ: ಅದರ ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರೆಂಟಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸ್ಪೇನ್‌ನ ಲಾ ಪಾಲ್ಮಾದ ನೊಗೇಲ್ಸ್ ಬೀಚ್‌ನಲ್ಲಿ ಕೊಚ್ಚಿಬಂದ ತಿಮಿಂಗಿಲದ ಕಳೇಬರವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇದನ್ನು ಸಮುದ್ರದಲ್ಲಿ ತೇಲುವ ಚಿನ್ನ ಎಂದು ಕರೆಯಲಾಗುತ್ತದೆ. ಲಾಸ್ ಪಾಲ್ಮಾಸ್ ವಿಶ್ವವಿದ್ಯಾಲಯ ಮತ್ತು ಪ್ರಾಣಿ ಸಂಶೋಧನಾ ಸಂಸ್ಥೆಯ ಆಶ್ರಯದಲ್ಲಿ ತಿಮಿಂಗಿಲದ ಸಾವಿಗೆ ಕಾರಣವನ್ನು ನಿರ್ಧರಿಸಲು ಶವಪರೀಕ್ಷೆ ನಡೆಸಲಾಯಿತು. ಈ ಪ್ರಕ್ರಿಯೆಯಲ್ಲಿ, ಅವರು ತಿಮಿಂಗಿಲದ ಹೊಟ್ಟೆಯಲ್ಲಿ ಅಪರೂಪದ ನಿಧಿಯನ್ನು ಕಂಡುಕೊಂಡರು.

ತಿಮಿಂಗಿಲದ ಹೊಟ್ಟೆಯಿಂದ ಸುಮಾರು 9.5 ಕೆಜಿ ತೂಕದ ವಾಂತಿಯನ್ನು ಹೊರತೆಗೆಯಲಾಯಿತು. ಇದರ ಮೌಲ್ಯ ಸುಮಾರು ರೂ. 4,47,62,500 ಕೋಟಿ ಎಂದು ಅಂದಾಜಿಸಲಾಗಿದೆ. ತಿಮಿಂಗಿಲ ವಾಂತಿ ಎಂದೂ ಕರೆಯಲ್ಪಡುವ ಅಂಬರ್ಗ್ರಿಸ್, ತಿಮಿಂಗಿಲಗಳ ಹೊಟ್ಟೆಯಲ್ಲಿ ಮಾತ್ರ ಉತ್ಪತ್ತಿಯಾಗುತ್ತದೆ. ತಿಮಿಂಗಿಲಗಳು ಸ್ಕೀಡ್ ಅನ್ನು ನುಂಗುತ್ತವೆ ಅವು ಹೊಟ್ಟೆಯನ್ನು ಪ್ರವೇಶಿಸಿದಾಗ, ಉಂಬ್ರೇನ್ ಎಂಬ ರಾಸಾಯನಿಕವು ಬಿಡುಗಡೆಯಾಗುತ್ತದೆ.

ಬಳಿಕ ಅದು ಮುದ್ದೆಯಾಗುತ್ತದೆ. ಅವುಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದ ತಿಮಿಂಗಿಲಗಳು ಅವುಗಳನ್ನು ವಾಂತಿ ಮಾಡುತ್ತವೆ. ಮುದ್ದೆಯಾಗಿರುವದನ್ನು ಅಂಬರ್ ಗ್ರಿಸ್ ಎಂದು ಕರೆಯಲಾಗುತ್ತದೆ. ಇದರ ಬೆಲೆ ಕೆಜಿಗೆ 30.50 ಲಕ್ಷ ರೂ.ವರೆಗೆ ಇರುತ್ತದೆ. ಈ ವಸ್ತುವನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!