ಗುಂಡಿ ತಪ್ಪಿಸಲು ಹೋಗಿ ಕ್ಯಾಂಟರ್ ಡಿಕ್ಕಿಯಾದ ಸ್ಕೂಟರ್: ಮಹಿಳೆ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು, ರಸ್ತೆ ಕಾಮಗಾರಿಯಿಂದ ನಡೆದ ಅಪಘಾತದಲ್ಲಿ ಮಹಿಳೆಯೊಬ್ಬರು ಬಲಿಯಾಗಿರುವ ದಾರುಣ ಘಟನೆ ನಡೆದಿದೆ.

ಖಾಸಗಿ ಶಾಲೆಯ ಉದ್ಯೋಗಿ ನಳಿನಾ ಮೃತಪಟ್ಟವರು.ಮಾಗಡಿ ರಸ್ತೆಯ ಚಿಕ್ಕಗೊಲ್ಲರಹಟ್ಟಿಯ ಬಳಿ ಇಂದು ಬೆಳಿಗ್ಗೆ ಸ್ಕೂಟರ್ ನಲ್ಲಿ ನಳಿನಾ ಅವರು ಹೋಗುತ್ತಿದ್ದಾಗ ರಸ್ತೆ ಕಾಮಗಾರಿಯ ಗುಂಡಿ ತಪ್ಪಿಸಲು ಹೋದಾಗ ಕ್ಯಾಂಟರ್ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಕಳೆದ ಕೆಲತಿಂಗಳಿನಿಂದ ರಸ್ತೆ ಕಾಮಗಾರಿ ನಡೆಯುತ್ತಿದ್ದು,ರಸ್ತೆ ಕಾಮಗಾರಿಯ ಗುಂಡಿ ತಪ್ಪಿಸಲು ವಾಹನ ಸವಾರರು ಅನಿವಾರ್ಯವಾಗಿ ಒನ್ ವೇ ರಸ್ತೆ ಬಳಸುತ್ತಿದ್ದಾರೆ. ಅದೇ ರೀತಿಯಲ್ಲಿ ಒನ್ ವೇ ಗೆ ನಳಿನಾ ಸ್ಕೂಟರ್ ಹೋಗುವಾಗ ಹಿಂದಿನಿಂದಿ ಬಂದ ಕ್ಯಾಂಟರ್ ತಲೆ ಮೇಲೆ ಹರಿದು ಸಾವನ್ನಪ್ಪಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!