ನಿಲ್ಲಿಸಿದ್ದ ಬೈಕ್ ಗೆ ಸ್ಕಾರ್ಪಿಯೋ ಡಿಕ್ಕಿಯಾಗಿ ಪಲ್ಟಿ: ಮಹಿಳೆ , ಮಕ್ಕಳಿಗೆ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಸಮೀಪದ ಪಾವಂಜೆ ಜಂಕ್ಷನ್ ಬಳಿ ಸ್ಕಾರ್ಪಿಯೊ ಚಾಲಕನ ನಿಯಂತ್ರಣ ತಪ್ಪಿ ಬೈಕ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು ಸ್ಕಾರ್ಪಿಯೋ ದಲ್ಲಿದ್ದ ಮಹಿಳೆ ಹಾಗೂ ಮಕ್ಕಳಿಗೆ ಗಾಯಗಳಾಗಿವೆ.

ಕೊಲ್ಲೂರು ಯಾತ್ರೆ ಮುಗಿಸಿ ಕೇರಳ ಕಡೆಗೆ ಹೋಗುತ್ತಿದ್ದ ಸ್ಕಾರ್ಪಿಯೊ ಪಾವಂಜೆ ಜಂಕ್ಷನ್ ಬಳಿ ಹೆದ್ದಾರಿ ತಡೆಗೆ ಇರಿಸಿದ್ದ ಬ್ಯಾರಿಕೇಡ್ ಬಳಿ ಅತಿ ವೇಗದಿಂದ ಚಲಾಯಿಸಿ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಅಂಗಡಿ ಎದುರು ನಿಲ್ಲಿಸಲಾಗಿದ್ದ ಬೈಕ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಈ ಸಂದರ್ಭ ಬೈಕ್ ಸವಾರ ಅಂಗಡಿಗೆ ಸಿಯಾಳ ಕುಡಿಯಲು ಹೋಗಿದ್ದರಿಂದ ಬಾರಿ ಅನಾಹುತ ತಪ್ಪಿದ್ದು ಸವಾರ ಪಕ್ಷಿಕೆರೆ ನಿವಾಸಿ ಸರ್ಫರಾಜ್ ಅಪಾಯದಿಂದ ಪಾರಾಗಿದ್ದಾನೆ

ಅಪಘಾತದ ರಭಸಕ್ಕೆ ಅಂಗಡಿಯ ಎದುರು ವ್ಯಾಪಾರಕ್ಕೆ ಇಟ್ಟಿದ್ದ ಸಿಯಾಳಗಳು ಚಲ್ಲಾಪಿಲ್ಲಿಯಾಗಿದೆ. ಕೂಡಲೇ ಸ್ಥಳೀಯರು ಸ್ಕಾರ್ಪಿಯೋ ದಲ್ಲಿದ್ದ ಗಾಯಾಳುಗಳನ್ನು ಮುಕ್ಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!