Sunday, December 3, 2023

Latest Posts

SHOCKING VIDEO| ಮಾರ್ಷಲ್ ಆರ್ಟ್ ಬಳಸಿ ದರೋಡೆ, ತೀವ್ರ ಭಯದಲ್ಲಿ ವ್ಯಾಪಾರಿಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಆತ್ಮರಕ್ಷಣೆಗಾಗಿ ಬಳಸುವ ಮಾರ್ಷಲ್ ಆರ್ಟ್ಸ್ ಪ್ರಯೋಗದಿಂದ ದರೋಡೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.  ಚಾಕು, ಚೂರಿ ತೋರಿಸಿ ಬೆದರಿಸಿ ಕಳ್ಳತನ ಮಾಡುತ್ತಿದ್ದವರ ಸ್ಟೈಲ್ ಬದಲಾಗಿದೆ. ಇದೀಗ ಶಸ್ತ್ರಾಸ್ತ್ರಗಳಿಲ್ಲದೆಯೇ ದಾಳಿ ನಡೆಸುತ್ತಿದ್ದಾರೆ. ದೆಹಲಿಯಲ್ಲಿ ನಡೆದಿರುವ ಈ ಆಘಾತಕಾರಿ ಘಟನೆ ಸ್ಥಳೀಯ ವ್ಯಾಪರಿಗಳನ್ನು ಬೆಚ್ಚಿ ಬೀಳಿಸಿದೆ.

ಪಶ್ಚಿಮ ದೆಹಲಿಯ ಹರಿನಗರ ಪ್ರದೇಶದಲ್ಲಿ ದರೋಡೆ ನಡೆದಿದ್ದು, ಮೂವರು ಖದೀಮರು ತಳ್ಳುವ ಗಾಡಿಯ ವ್ಯಾಪಾರಿಯನ್ನು ದರೋಡೆ ಮಾಡಿದ್ದಾರೆ. ಮೂವರು ದರೋಡೆಕೋರರಲ್ಲಿ ಒಬ್ಬರು ವ್ಯಾಪಾರಿಯನ್ನು ಹಿಂದಿನಿಂದ ಅಟ್ಯಾಕ್‌ ಮಾಡಿ ಪ್ರಜ್ಞೆ ತಪ್ಪುವಂತೆ ಮಾಡಿದ್ದಾನೆ. ಅಷ್ಟರಲ್ಲಿ ಮತ್ತೊಬ್ಬ ಬಂದು ವ್ಯಾಪಾರಿಯ ಜೇಬಿನಲ್ಲಿದ್ದ 3,200 ರೂ ಎಗರಿಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಈ ದರೋಡೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಮೂವರನ್ನು ಸೆರೆ ಹಿಡಿದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!