ಹೊಸದಿಗಂತ ವರದಿ ಉಡುಪಿ:
ಬುಧವಾರ ತಡರಾತ್ರಿ ಜಿಲ್ಲೆಯ ಗಂಗೊಳ್ಳಿ, ಉಡುಪಿಯ ಆದಿ ಉಡುಪಿ ಸಮೀಪದ ಪಂದುಬೆಟ್ಟು, ಹೂಡೆ ಮತ್ತು ಸಿಟಿ ಸೆಂಟರ್ ಬಳಿಯ ಶಂಕರ್ ಬಿಲ್ಡಿಂಗ್ ನಲ್ಲಿ ಕಾರ್ಯಚರಿಸುತ್ತಿದ್ದ ಎಸ್.ಡಿ.ಪಿ.ಐ ಕಚೇರಿ ಹಾಗು ಮಾಜಿ ಜಿಲ್ಲಾಧ್ಯಕ್ಷ ನಝೀರ್ ಅಹಮ್ಮದ್ ಮತ್ತು ಅವರ ಸಹೋದರ ಬಶೀರ್ ಅಹಮ್ಮದ್ ಅವರ ಮನೆಗೆ ತಹಶೀಲ್ದಾರ್ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮತ್ತು ತಂಡ ಬೀಗ ಜಡಿದಿದೆ.
ಕುಂದಾಪುರ ತಹಶೀಲ್ದಾರ್ ಕಿರಣ್ ಗೋರಯ್ಯ, ಡಿವೈಎಸ್ಪಿ ಶ್ರೀಕಾಂತ್ ನೇತೃತ್ವದಲ್ಲಿ ಗಂಗೊಳ್ಳಿಯ ಎಸ್.ಡಿ.ಪಿ.ಐ ಕಚೇರಿಗೆ, ಉಡುಪಿಯ ಆದಿ ಉಡುಪಿ ಸಮೀಪದ ಪಂದುಬೆಟ್ಟುವಿಗೆ ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ ಅವರ ತಂಡ, ಹೂಡೆ, ಶಂಕರ ಬಿಲ್ಡಿಂಗ್ ನ ಕಚೇರಿ ಮತ್ತು ಮಾಜಿ ಜಿಲ್ಲಾಧ್ಯಕ್ಷ ನಝೀರ್ ಅಹಮ್ಮದ್ ಹಾಗು ಬಶೀರ್ ಅಹಮ್ಮದ್ ಮನೆಗೆ ಎಸ್ಪಿ ಅಕ್ಷಯ್, ಉಡುಪಿ ಡಿವೈಎಸ್ಪಿ ಸುಧಾಕರ್ ನಾಯ್ಕ್, ನಗರ ಠಾಣಾಧಿಕಾರಿ ಪ್ರಮೋದ್ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ, ಬೀಗ ಜಡಿದಿದೆ.
ಮನೆಯಲ್ಲಿ ಯಾರು ಇರಲಿಲ್ಲ
ಎಸ್.ಡಿ.ಪಿ.ಐ ನ ಮಾಜಿ ಜಿಲ್ಲಾಧ್ಯಕ್ಷ ನಝೀರ್ ಅಹಮ್ಮದ್ ಮತ್ತು ಅವರ ಸಹೋದರ ಬಶೀರ್ ಅಹಮ್ಮದ್ ಅವರ ಮನೆಗೆ ದಾಳಿ ನಡೆಸಿದ ವೇಳೆ ಮನೆಗೆ ಬೀಗ ಹಾಕಿದ್ದು, ಮನೆಯಲ್ಲಿ ಯಾರು ಇರಲಿಲ್ಲ ಎನ್ನಲಾಗಿದೆ
ಪಿ.ಎಫ್.ಐ ಗೆ ಸಂಭಂದ ಪಟ್ಟ ಕಡತ ವಶಕ್ಕೆ
ಉಡುಪಿಯಲ್ಲಿ ಪಿ.ಎಫ್.ಐ ಹೆಸರಿನಲ್ಲಿ ಯಾವ ಕಚೇರಿಯೂ ಕಾರ್ಯನಿರ್ವಹಿಸುತ್ತಿಲ್ಲ. ಎಸ್.ಡಿ.ಪಿ.ಐ ಕಚೇರಿಯಲ್ಲೇ ಪಿ.ಎಫ್.ಐ ಚಟುವಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಆಧಾರದಲ್ಲಿ ಪೋಲಿಸರು ದಾಳಿ ನಡೆಸಿದ್ದು, ಪಿ.ಎಫ್.ಐ ಗೆ ಸಂಭಂದಪಟ್ಟ ಕರಪತ್ರ, ದಾಖಲೆಗಳು ದೊರೆತಿದ್ದು, ವಶಕ್ಕೆ ಪಡೆಯಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.