ಕಡಲ ಸಿಂಹಗಳ ಚೇಸಿಂಗ್‌ಗೆ ಎದ್ನೋ ಬಿದ್ನೋ ಎಂದು ಓಡಿದ ಪ್ರವಾಸಿಗರು.!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಾರಾಂತ್ಯದಲ್ಲಿ ಮೈಂಡ್‌ ರೀಫ್ರೆಶ್‌ ಮಾಡಿಕೊಳ್ಳಲು ಬಂದವರಿಗೆ ಕಡಲ ಸಿಂಹಗಳು ಸುಸ್ತು ಮಾಡಿವೆ. ಕಡಲತೀರದಲ್ಲಿ ಶಾಂತಿಯುತವಾಗಿ ವಿಶ್ರಾಂತಿ ಪಡೆಯುತ್ತಿದ್ದ ಎರಡು ಸಮುದ್ರ ಸಿಂಹಗಳು ವಿಚಲಿತಗೊಂಡು ಸಮುದ್ರದಲ್ಲಿ ಆಟವಾಡುತ್ತಿದ್ದ ಎಲ್ಲರನ್ನೂ ಓಡಿಸಿವೆ.

ಅಮೆರಿಕದ ಸ್ಯಾನ್ ಡಿಯಾಗೋ ಬೀಚ್‌ನಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಮುದ್ರದಲ್ಲಿ ಈಜುತ್ತಾ ಕುಣಿದು ಕುಪ್ಪಳಿಸುವವರು, ಸಮುದ್ರ ತಟದಲ್ಲಿ ವಿಶ್ರಾಂತಿ ಪಡೆಯುವವರು, ಸೆಲ್ಪೀ ಕ್ರೇಜ್‌ ಹೀಗೆ ಒಬ್ಬೊಬ್ಬರು ಒಂದೊಂದು ರೀತಿ ಎಂಜಾಯ್‌ ಮಾಡ್ತಿರುವ ವೇಳೆ ಓರ್ವ ಮಹಿಳೆ ಅಲ್ಲಿಯೇ ಮಲಗಿದ್ದ ಕಡಲ ಸಿಂಹಗಳ ಫೋಟೋ ತೆಗೆಯಲು ಮುಂದಾಗಿದ್ದಾಳೆ. ಮಹಿಳೆಯ ಈ ಕಾರ್ಯದಿಂದ ಅವುಗಳಿಗೆ ನಿದ್ರಾಭಂಗವಾಗಿ ಸಮುದ್ದಲ್ಲಿದ್ದವರನ್ನು ಅಟ್ಟಾಡಿಸಿವೆ. ಇದರಿಂದ ಸಮುದ್ರ ತೀರದಲ್ಲಿದ್ದವರು, ಸಮುದ್ರದಲ್ಲಿದ್ದವರು ಎಲ್ಲರೂ ಎದ್ನೋ ಬಿದ್ನೋ ಅಂತ ಓಡಲಾರಂಭಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!