ಕಡಲು ಉಕ್ಕೇರುವ ಸಾಧ್ಯತೆ: ಕಾಸರಗೋಡಿನ ಬೀಚ್‌ಗಳಲ್ಲಿ ಹೈ ಅಲರ್ಟ್, ಪ್ರವಾಸಿಗರ ಭೇಟಿಗೆ ನಿರ್ಬಂಧ

ಹೊಸದಿಗಂತ ಡಿಜಿಟಲ್, ಮಂಗಳೂರು:

ಸಮುದ್ರ ಉಕ್ಕೇರುವ ಸಾಧ್ಯತೆ ಇದೆ ಎಂಬ ಬಗ್ಗೆ ರಾಷ್ಟ್ರೀಯ ಸಮುದ್ರಶಾಸ್ತ್ರ ಮತ್ತು ಸಂಶೋಧನಾ ಕೇಂದ್ರ ನೀಡಿರುವ ‘ರೆಡ್ ಅಲರ್ಟ್’ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಎಲ್ಲಾ ಕಡಲ ತೀರಗಳ ವ್ಯಾಪ್ತಿಯಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದ್ದು, ಎಲ್ಲಾ ಪ್ರವಾಸಿ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

ಬೇಕಲ, ಪಳ್ಳಿಕ್ಕರ ಬೀಚ್, ಹೊಸದುರ್ಗ ಕೈಟ್ ಬೀಚ್, ಚೆಂಬರಿಕಾ, ಅಯಿತ್ತಲ, ವಲಿಯಪರಂಬ, ಕಣ್ವತೀರ್ಥ ಬೀಚ್‌ಗಳಲ್ಲಿ ಈಗಾಗಲೇ ಜಿಲ್ಲಾಡಳಿತ ವ್ಯಾಪಕ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಈ ಭಾಗಗಳಿಗೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಇನ್ನು ಜಿಲ್ಲೆಯಲ್ಲಿರುವ ತೇಲುವ ಸೇತುವೆಯ ಕಾರ್ಯಾಚರಣೆಯನ್ನು ಕೂಡಾ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಸಂಭಾವ್ಯ ಪರಿಸ್ಥಿತಿ ಎದುರಿಸಲು ಆಯಾ ಭಾಗದ ತಹಸೀಲ್ದಾರ್‌ಗಳಿಗೆ ನಿರ್ದೇಶನ ನೀಡಲಾಗಿದ್ದು, ಅಗತ್ಯಬಿದ್ದರೆ ಪರಿಹಾರ ಶಿಬಿರಗಳನ್ನು ಪ್ರಾರಂಭಿಸಲು ಕೂಡಾ ಸಂಸ್ಥೆಗಳು, ಶಾಲೆಗಳನ್ನು ಗುರುತಿಸಿಕೊಳ್ಳಲಾಗಿದೆ. ಜಿಲ್ಲಾ ವೈದ್ಯಾಧಿಕಾರಿಗಳು, ಕರಾವಳಿ ಪೊಲೀಸ್ ಠಾಣೆಗಳು ಮತ್ತು ಅಗ್ನಿಶಾಮಕ ಠಾಣೆಗಳಿಗೂ ಅಲರ್ಟ್ ಇರುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!