ಶಾಸಕ ಭರತ್ ರೆಡ್ಡಿ ಮನೆಯಲ್ಲಿ 2ನೇ ದಿನವೂ ಮುಂದುವರಿದ ಶೋಧ ಕಾರ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಳ್ಳಾರಿ ನಗರ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಮನೆ ಹಾಗೂ ಕಚೇರಿ ಮೇಲೆ ನಡೆಯುತ್ತಿರುವ ಇಡಿ ದಾಳಿ ಎರಡನೇ ದಿನವೂ ಮುಂದುವರಿದಿದೆ. ಶನಿವಾರ ಮನೆ ಮೇಲೆ ಶೋಧ ಕಾರ್ಯಾಚರಣೆ ಆರಂಭವಾಗಿದ್ದು, ಇಂದು ಕೂಡ ಮುಂದುವರಿದಿದೆ. ಶನಿವಾರ ಕಾರ್ಯಾಚರಣೆ ನಡಿಸಿರುವ ಅಧಿಕಾರಿಗಳು ಪ್ರಮುಖ ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರೆ.

ಶನಿವಾರ ಶಾಸಕ ನಾರಾ ಭರತ್ ರೆಡ್ಡಿ ಅವರ ಮನೆ ಹಾಗೂ ಕಚೇರಿ, ಭರತ್ ರೆಡ್ಡಿ ಅವರ ತಂದೆ ಸೂರ್ಯನಾರಾಯಣರೆಡ್ಡಿ ಅವರ ಮನೆ, ಕಚೇರಿ ಹಾಗೂ ಅವರ ಚಿಕ್ಕಪ್ಪ ಪ್ರತಾಪರೆಡ್ಡಿ ಮನೆ, ಕಚೇರಿಗಳಲ್ಲಿ ಶೋಧ ನಡೆಸಲಾಗಿತ್ತು. ಭರತ್ ರೆಡ್ಡಿ ಅವರ ಸಂಬಂಧಿಕರ ಮನೆಯಲ್ಲೂ ಶೋಧ ಕಾರ್ಯ ನಡೆದಿದೆ.

ಬೆಂಗಳೂರಿನಲ್ಲಿರುವ ಮನೆ ಮೇಲೂ ಇಡಿ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಎರಡು ಇನ್ನೋವಾ ಕಾರುಗಳಲ್ಲಿ ಬಂದ ಅಧಿಕಾರಿಗಳು ಬೆಂಗಳೂರಿನ ಬಿಡಿಎ ಇಂದಿರಾನಗರ ಕಾಂಪ್ಲೆಕ್ಸ್ ಬಳಿಯ ಮನೆಯೊಂದರಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

14 ಪೊಲೀಸ್ ಅಧಿಕಾರಿಗಳು ಮನೆಯನ್ನು ಶೋಧಿಸಿದ್ದು, ಭದ್ರತೆಗಾಗಿ ಸಿಆರ್‌ಪಿಎಫ್ ಸಿಬ್ಬಂದಿಯನ್ನು ಕರೆಸಲಾಗಿತ್ತು. ಬೆಳಗ್ಗೆ 5 ಗಂಟೆಗೆ ಮನೆಗೆ ಬಂದ ಸಿಬ್ಬಂದಿ, 6 ಗಂಟೆಗೆ ಮನೆ ಪ್ರವೇಶಿಸಿ, ತಪಾಸಣೆ ಆರಂಭಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!