ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ, ಅಂತಿಮ ಸುತ್ತಿನಲ್ಲಿ 5 ಸ್ಥಳ: ಎಂಬಿ ಪಾಟೀಲ್‌

ಹೊಸದಿಗಂತ ಡಿಜಿಟಲ್ ಡೆಸ್ಕ್;

ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ 5 ಸ್ಥಳ ಗುರುತಿಸಲಾಗಿದೆ. ಆದರೆ ಯಾವುದೇ ಸ್ಥಳ ಅಂತಿಮವಾಗಿಲ್ಲ ಎಂದು ಸಚಿವ ಎಂಬಿ‌ ಪಾಟೀಲ್ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಸಂಬಂಧ ಆಂತರಿಕ ಚರ್ಚೆ ಸಲುವಾಗಿ ಇಂದು ನಾನು‌ ಡಿಸಿಎಂ‌ ಡಿಕೆ ಶಿವಕುಮಾರ್‌ ಅವರ ಜೊತೆ ಸಭೆ ನಡೆಸಿದೆವು. ನಮ್ಮ ಬೆಂಗಳೂರು, ಕರ್ನಾಟಕಕ್ಕೆ ಒಳ್ಳೆಯದಾಗಬೇಕು. ಆರ್ಥಿಕ ಸ್ಥಿತಿ, ವ್ಯವಹಾರಕ್ಕೆ ಉಪಯೋಗ ಆಗಬೇಕು ಎಂದು ಹೇಳಿದರು.

ಒಂದು ವಾರದ ನಂತರ ಮತ್ತೊಂದು ಸಭೆ ಮಾಡುತ್ತೇವೆ. ಸಭೆ ನಡೆದ ಬಳಿಕ ನಿರ್ಧಾರ ಆಗಲಿದೆ.ಅಳೆದು ತೂಗಿ ಈ ನಿರ್ಧಾರ ಮಾಡುತ್ತೇವೆ. ಯಾರದ್ದು ಪರ್ಸನಲ್ ಇಲ್ಲ, ಇದೇ ಜಾಗ ಅಂತ ಇಲ್ಲ. ಡಿಸಿಎಂ ಜೊತೆ ನಗರಾಭಿವೃದ್ಧಿ ಸಚಿವರು ಕೂಡ ಇದ್ದಾರೆ ಎಂದರು.

ದಾಬಾಸ್ ಪೇಟೆ,‌ ನೆಲಮಂಗಲ, ಕುಣಿಗಲ್ ರಸ್ತೆಯಲ್ಲಿಎರಡು ಜಾಗ, ಹಾರೋಹಳ್ಳಿ ಹಾಗೂ ಬಿಡದಿ ಜಾಗ ಗುರುತಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!