ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯ ಇಂದು ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿದ್ದು, ಟೀಂ ಇಂಡಿಯಾ ಗೆಲ್ಲುವ ಭರವಸೆಯಲ್ಲಿದೆ.
ಈಗಾಗಲೇ ಮೂರು ಪಂದ್ಯಗಳ ಸರಣಿಯಲ್ಲಿ ಒಂದು ಪಂದ್ಯ ಗೆದ್ದಿರುವ ಭಾರತ ಈ ಪಂದ್ಯವನ್ನೂ ಗೆದ್ದು ಸರಣಿ ಕೈವಶಮಾಡಿಕೊಳ್ಳುವ ತವಕದಲ್ಲಿದೆ. ಆದರೆ ಶ್ರೀಲಂಕಾ ಒಂದು ಪಂದ್ಯ ಸೋತಿರುವ ಕಾರಣ ಈ ಪಂದ್ಯ ಗೆದ್ದು ಮೂರನೇ ನಿರ್ಣಾಯಕ ಪಂದ್ಯ ಆಡುವ ಅವಕಾಶಕ್ಕೆ ಕಾಯುತ್ತಿದೆ.
ಕಠಿಣ ಪೈಪೋಟಿಗೆ ತಯಾರಾಗಿರುವ ಲಂಕಾಪಡೆಗೆ ಉತ್ತರ ನೀಡಲು ಟೀಂ ಇಂಡಿಯಾ ತಯಾರಾಗಿದ್ದು, ಅಬ್ಬರಿಸಲು ತಯಾರಾಗಿದೆ. ಬ್ಯಾಟ್ಸ್ಮನ್ಗಳಿಗೆ ಸೂಕ್ತವಾದ ಪಿಚ್ ಈಡನ್ ಗಾರ್ಡನ್ಸ್ನಲ್ಲಿದ್ದು, ಸ್ಪಿನ್ನರ್ಗಳಿಗೂ ಇದು ಉತ್ತಮ ಅವಕಾಶವಾಗಿದೆ.