Monday, October 27, 2025

12 ರಾಜ್ಯಗಳಲ್ಲಿ ಎರಡನೇ ಹಂತದ ಮತದಾರರ ಪಟ್ಟಿ ಪರಿಷ್ಕರಣೆ: ಚುನಾವಣಾ ಆಯೋಗ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ನ ಎರಡನೇ ಹಂತವನ್ನು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಲಾಗುವುದು ಎಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್, ಬಿಹಾರದಲ್ಲಿ ನಡೆಸಿದ SIR ಯಶಸ್ವಿಯಾಗಿದೆ. ಈಗ ಎರಡನೇ ಹಂತದಲ್ಲಿ 12 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ SIR ಶುರುವಾಗಲಿದೆ ಎಂದು ತಿಳಿಸಿದರು.

ಆಯೋಗದ ಕಾನೂನಿನ ಪ್ರಕಾರ ಮತದಾರರ ಪಟ್ಟಿ ಪರಿಷ್ಕರಣೆ ಅಗತ್ಯವಿದೆ. ಪ್ರತಿಯೊಂದು ರಾಜಕೀಯ ಪಕ್ಷವೂ ಪರಿಷ್ಕರಣೆ ನಡೆಸದ ಬಗ್ಗೆ ದೂರು ನೀಡಿವೆ. ಇಲ್ಲಿಯವರಗೆ ಎಂಟು ಬಾರಿ SIR ನಡೆಸಿದೆ. 2002-2004 ರಲ್ಲಿ ಕೊನೆಯದಾಗಿ SIR ನಡೆಸಲಾಗಿತ್ತು. ಎರಡು ದಶಕದ ಬಳಿಕ ಈಗ SIR ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಳೆದ 20 ವರ್ಷದ ಅವಧಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಸಾಕಷ್ಟು ಮತದಾರರ ವಿಳಾಸ ಬದಲಾವಣೆಯಾಗಿರುತ್ತದೆ, ವಿದೇಶಿಗರು ಪಟ್ಟಿಯಲ್ಲಿ ಸೇರಿರುತ್ತಾರೆ. ಕೆಲವರು ಮರಣದ ಬಳಿಕವೂ ಪಟ್ಟಿಯಲ್ಲಿ ಹೆಸರು ಉಳಿದುಕೊಂಡಿರುತ್ತದೆ. ಇದನ್ನು ತೆರವು ಮಾಡಲು SIR ಅಗತ್ಯವಿದೆ ಎಂದು ಹೇಳಿದರು.

9 ರಾಜ್ಯಗಳು:

ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ತಮಿಳುನಾಡು, ಗೋವಾ, ಛತ್ತೀಸ್‌ಗಢ, ಮಧ್ಯಪ್ರದೇಶ, ಗುಜರಾತ್, ಕೇರಳ ಮತ್ತು ರಾಜಸ್ಥಾನ.

3 ಕೇಂದ್ರಾಡಳಿತ ಪ್ರದೇಶಗಳು:

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಪುದುಚೇರಿ.

error: Content is protected !!