ಹೊಸದಿಗಂತ ಡಿಜಿಟಲ್ ಡೆಸ್ಕ್ :
ಸೋಮವಾರ ನಡೆದ ದ್ವಿತೀಯ ಪಿಯುಸಿ ಗಣಿತ ಪರೀಕ್ಷೆಗೆ ಕರ್ನಾಟಕದಾದ್ಯಂತ 12,533 ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ.
ಯಾವುದೇ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಎಸಗಿದ ಅಥವಾ ದುಷ್ಕೃತ್ಯ ಎಸಗಿದ ಪ್ರಕರಣಗಳು ವರದಿಯಾಗಿಲ್ಲ. 2024 ರ ಪರೀಕ್ಷೆಗಳಿಂದ ಜಾರಿಗೆ ತರಲಾದ ಪರೀಕ್ಷೆಗಳ ವೆಬ್ ಸ್ಟ್ರೀಮಿಂ ಹಾಗೂ ಇತರ ಕಟ್ಟುನಿಟ್ಟಿನ ಕ್ರಮಗಳು ಅಕ್ರಮವನ್ನು ತಟೆಗಟ್ಟುವಲ್ಲಿ ನೆರವಾಗಿವೆ ಎಂದು ಅಧಿಕಾರಿಗಳು ಅಬಿಪ್ರಾಯಪಟ್ಟಿದ್ದಾರೆ.
ಮೂರು ಪರೀಕ್ಷೆಗಳ ಆಯ್ಕೆ ಇರುವುದರಿಂದ ಗೈರುಹಾಜರಾದವರ ಸಂಖ್ಯೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷಾ ತಯಾರಿಯ ಬಗ್ಗೆ ವಿಶ್ವಾಸ ಹೊಂದಿಲ್ಲದಿದ್ದರೆ ಇನ್ನೂ ಎರಡು ಪರೀಕ್ಷೆಗಳಿಗೆ ಹಾಜರಾಗಲು ಅವಕಾಶವಿರುವುದರಿಂದ, ಅವರು ಪರೀಕ್ಷೆಗಳಿಗೆ ಗೈರಾಗುತ್ತಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.