Thursday, March 30, 2023

Latest Posts

ಪರಾರಿಯಾದ `ವಾರಿಸ್ ಪಂಜಾಬ್ ದೇ’ ಮುಖ್ಯಸ್ಥನ ಬಂಧನಕ್ಕೆ ಬಿಗಿ ಪೊಲೀಸ್‌ ಬಂದೋಬಸ್ತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪರಾರಿಯಾಗಿರುವ ಸ್ವಯಂಘೋಷಿತ ಉಗ್ರಗಾಮಿ ಖಲಿಸ್ತಾನ್ ಪರ ಸಹಾನುಭೂತಿ ಹೊಂದಿದ್ದ ಅಮೃತಪಾಲ್ ಸಿಂಗ್​​ನ್ನು ಸೆರೆಹಿಡಿಯಲು ಶೋಧ ಮುಂದುವರಿದಿದೆ. ಅಮೃತಸರದ ಜಲ್ಲುಪುರ್ ಖೇರಾ ಗ್ರಾಮದಲ್ಲಿರುವ ಅಮೃತಪಾಲ್ ಸಿಂಗ್ ಅವರ ನಿವಾಸದ ಹೊರಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಅವರನ್ನು ಬಂಧಿಸಲು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ.

ಪೊಲೀಸರ ಪ್ರಕಾರ ʻವಾರಿಸ್‌ ಪಂಜಾಬ್‌ ದೇʼ ಮುಖ್ಯಸ್ಥ ಪ್ರಸ್ತುತ ಪರಾರಿಯಾಗಿರುವುದಾಗಿ ಶನಿವಾರ ತಡರಾತ್ರಿ ಜಲಂಧರ್ ಕಮಿಷನರ್ ಕುಲದೀಪ್ ಸಿಂಗ್ ಚಾಹಲ್ ದೃಢಪಡಿಸಿದರು.

“ವಾರಿಸ್ ಪಂಜಾಬ್ ದೇ’ ಮುಖ್ಯಸ್ಥ ಅಮೃತಪಾಲ್ ಸಿಂಗ್ ಅವರನ್ನು ಪರಾರಿ ಎಂದು ಘೋಷಿಸಲಾಗಿದ್ದು, ಎರಡು ಕಾರು ಹಾಗೂ ಬಂದೂಕುಧಾರಿಗಳನ್ನು ವಶಕ್ಕೆ ಪಡೆಯಲಾಗಿದೆ. ಭದ್ರತಾ ಬೆಂಗಾವಲುದಾರರ ಬಂದೂಕುಗಳು ಕಾನೂನುಬದ್ಧವಾಗಿ ಖರೀದಿಸಲಾಗಿದೆಯೇ ಎಂದು ನಾವು ಪರಿಶೀಲಿಸಿದ್ದೇವೆ. ಪಂಜಾಬ್ ಪೊಲೀಸರು ಅಮೃತಪಾಲ್ ಸಿಂಗ್‌ಗಾಗಿ ಶೋಧ ಆರಂಭಿಸಿದ್ದಾರೆ ಮತ್ತು ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು. ಇದುವರೆಗೂ ಒಟ್ಟು 78 ಜನರನ್ನು ಇದುವರೆಗೆ ಬಂಧಿಸಲಾಗಿದ್ದು, ಪಂಜಾಬ್‌ನಾದ್ಯಂತ ಭದ್ರತೆ ಹೆಚ್ಚಿಸಲಾಗಿದೆ.

ಅಮೃತ್‌ ಪಾಲ್‌ ಸಿಂಗ್ ಇರುವಿಕೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ನಿವಾಸದಲ್ಲಿ ಪೊಲೀಸರು 3-4 ಗಂಟೆಗಳ ಕಾಲ ಶೋಧ ನಡೆಸಿದರು. ಯಾವುದೇ ಅಕ್ರಮ ಪತ್ತೆಯಾಗಿಲ್ಲ. ಎಂದು ಪಾಲ್‌ ಸಿಂಗ್‌ ತಂದೆ ಹೇಳಿದ್ದಾರೆ. ಶನಿವಾರ ಪಂಜಾಬ್ ಪೊಲೀಸರು ವಾರಿಸ್ ಪಂಜಾಬ್ ದೇ (WPD) ಯ ಅಂಶಗಳ ವಿರುದ್ಧ ರಾಜ್ಯದಲ್ಲಿ ಬೃಹತ್ ಸರ್ಚ್ ಆಪರೇಷನ್ (CASO) ಪ್ರಾರಂಭಿಸಿದರು.
ಕಾರ್ಯಾಚರಣೆಯ ಸಂದರ್ಭದಲ್ಲಿ ಇದುವರೆಗೆ ಒಟ್ಟು 78 ಜನರನ್ನು ಬಂಧಿಸಲಾಗಿದ್ದು, ಇನ್ನೂ ಹಲವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

ರಾಜ್ಯಾದ್ಯಂತ ನಡೆಸಿದ ಕಾರ್ಯಾಚರಣೆಯಲ್ಲಿ, 315 ಬೋರ್ ರೈಫಲ್, 12 ಬೋರ್‌ನ ಏಳು ರೈಫಲ್‌ಗಳು, ಒಂದು ರಿವಾಲ್ವರ್ ಮತ್ತು ವಿವಿಧ ಕ್ಯಾಲಿಬರ್‌ಗಳ 373 ಲೈವ್ ಕಾರ್ಟ್ರಿಡ್ಜ್‌ಗಳು ಸೇರಿದಂತೆ ಒಂಬತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸ್ತುತ ಪರಾರಿಯಾಗಿರುವ ಖಲಿಸ್ತಾನಿ ಸಹಾನುಭೂತಿ ‘ವಾರಿಸ್ ಪಂಜಾಬ್ ದೇ’ ಮುಖ್ಯಸ್ಥ ಅಮೃತಪಾಲ್ ಸಿಂಗ್‌ನನ್ನು ಬಂಧಿಸಲು ಹುಡುಕಾಟಗಳು ಮುಂದುವರೆದಿದ್ದು, ರಾಜ್ಯದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಇಂಟರೆನ್‌ಟ್‌ ಸ್ಥಗಿತಗೊಳಿಸಲಾಗಿದೆ. ಅಮೃತಸರದ ಜಲ್ಲುಪುರ್ ಖೇರಾ ಗ್ರಾಮದಲ್ಲಿರುವ ‘ವಾರಿಸ್ ಪಂಜಾಬ್ ದೇ’ ಮುಖ್ಯಸ್ಥ ಅಮೃತಪಾಲ್ ಸಿಂಗ್ ಅವರ ನಿವಾಸದ ಹೊರಗೆ ಪಂಜಾಬ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಗ್ರಾಮಸ್ಥರು ಬಿಟ್ಟು ಬೇರ್ಯಾರೂ ಬರದಂತೆ ಸಂಪೂರ್ಣ ಭದ್ರತೆ ಕೈಗೊಳ್ಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!