ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಎಂಎಲ್ಎ ರವಿ ಕುಮಾರ್ ಗೌಡ ನಟಿ ರಶ್ಮಿಕಾಗೆ ಒಂದು ಪಾಠ ಕಲಿಸಬೇಕು ಎಂದು ಹೇಳಿದ್ದು ಕೊಡವ ಸಮುದಾಯದಲ್ಲಿ ಆತಂಕ ಮೂಡಿಸಿದ್ದು,ಹೀಗಾಗಿ ರಶ್ಮಿಕಾಗೆ ಭದ್ರತೆ ನೀಡುವಂತೆ ಸಮುದಾಯದವರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
ಕೊಡವ ರಾಷ್ಟ್ರೀಯ ಪರಿಷತ್ತಿನ ಅಧ್ಯಕ್ಷ ಎನ್.ಯು. ನಾಚಪ್ಪ, ರಶ್ಮಿಕಾ ಮಂದಣ್ಣ ಕೊಡವ ಬುಡಕಟ್ಟು ಜನಾಂಗದವರು ಮತ್ತು ಭಾರತೀಯ ಚಲನಚಿತ್ರೋದ್ಯಮದಲ್ಲಿ ತಮ್ಮ ಸಮರ್ಪಣೆ ಮತ್ತು ಪ್ರತಿಭೆಯಿಂದ ಯಶಸ್ಸನ್ನು ಗಳಿಸಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ಕೊಡವ ಸಮುದಾಯದ ಇತರ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಒತ್ತಾಯಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕರ್ನಾಟಕ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ಪತ್ರ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.
ರಶ್ಮಿಕಾ ಮಂದಣ್ಣ, ಕಳೆದ ವರ್ಷ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಹ್ವಾನಿಸಿದಾಗ ಭಾಗವಹಿಸಲು ನಿರಾಕರಿಸಿದ್ದರು. ‘ನನಗೆ ಹೈದರಾಬಾದ್‌ನಲ್ಲಿ ಮನೆ ಇದೆ, ಕರ್ನಾಟಕ ಎಲ್ಲಿದೆ ಎಂದು ನನಗೆ ಗೊತ್ತಿಲ್ಲ, ನನಗೆ ಸಮಯವಿಲ್ಲ. ನಾನು ಬರಲು ಸಾಧ್ಯವಿಲ್ಲ ಎಂದಿದ್ದರು. ನಮ್ಮ ಶಾಸಕಾಂಗ ಸ್ನೇಹಿತರೊಬ್ಬರು ರಶ್ಮಿಕಾರನ್ನು ಕಾರ್ಯಕ್ರಮಕ್ಕೆ ಕರೆಯಲು 10-12 ಬಾರಿ ಮನೆಗೆ ಹೋಗಿದ್ದರು ಸಹ ನಿರಾಕರಿಸಿದ್ದರು, ಇಲ್ಲಿ ಬೆಳೆದು ಕನ್ನಡವನ್ನು ನಿರ್ಲಕ್ಷಿಸಿದ ಅವರಿಗೆ ಒಂದು ಪಾಠ ಕಲಿಸಬಾರದ?” ಎಂದು ಎಂಎಲ್ಎ ರವಿ ಕುಮಾರ್ ಗೌಡ ಹೇಳಿದ್ದರು.