ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದ ನಿಷೇಧಿತ ಸಂಘಟನೆಗಳಿಗೆ ಸೇರಿದ ವಿವಿಧ ಸಂಘಟನೆಗಳ ನಾಲ್ವರ ಉಗ್ರರನ್ನು ಬಂಧಿಸಲಾಗಿದೆ.
ಪಶ್ಚಿಮ ಇಂಫಾಲ್ ಜಿಲ್ಲೆಯ ಸಗೋಲ್ ಬಂದ್ ಸಯಾಂಗ್ ಕುರಾವ್ ಮಖೋನ್ಗ್ ಪ್ರದೇಶದಲ್ಲಿ ನಿಷೇಧ ಸಂಘಟನೆ ಪೀಪಲ್ಸ್ ಲಿಬರೇಷನ್ ಆರ್ಮಿಗೆ ಸೇರಿದ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ. ಬಂಧಿತ ಮಹಿಳೆಯನ್ನ ಥೋಕ್ ಚೋಮ್ ಒಂಗ್ಬಿ ಎಂದು ಗುರುತಿಸಲಾಗಿದೆ.
ಮತ್ತೊಂದು ಕಾರ್ಯಾಚರಣೆಯಲ್ಲಿ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ ಸದಸ್ಯನನ್ನು ಭಾರತ-ಮಯನ್ಮಾರ್ ಗಡಿ ಬಳಿ ಬಂಧಿಸಲಾಗಿದೆ. ಈತನನ್ನು ಪೂರ್ವ ಇಂಫಾಲ ಜಿಲ್ಲೆಯ ಖುರೈ ಬೈರೆಂಥೋಂಗ್‌ನ ಮೊಯಿರಾಂಗ್ಲಮ್ ರಿಕಿ ಸಿಂಗ್ (22) ಎಂದು ಗುರುತಿಸಲಾಗಿದೆ.
ಸುಲಿಗೆ ಆರೋಪದಡಿ ಪ್ರೆಪಕ್‌ನ ಸದಸ್ಯನನ್ನು ಕಾಕ್ಸಿಂಗ್ ಜಿಲ್ಲೆಯ ಸೆ.ಜಿನ್ ನಿಂಗೋಲ್ಸಾಂಗ್ ಪ್ರದೇಶದಲ್ಲಿ ಬಂಧಿಸಲಾಗಿದೆ. ಲೈಶ್ರಾಮ್ ಬಿಶೋರ್ಜಿತ್ ಮೈಟೈ (33) ಎಂದು ಗುರುತಿಸಲಾಗಿದೆ.
ಪಶ್ಚಿಮ ಇಂಫಾಲ ಜಿಲ್ಲೆಯ ಕಾಕ್ತಾ ಪ್ರದೇಶದಲ್ಲಿ ಯುಮ್ನಾಮ್ ಪ್ರೇಮ್‌ಜಿತ್ ಮೈಟ್ಟಿ (54) ಅವರನ್ನು ಬಂಧಿಸಲಾಯಿತು. ಈತ ನಿಷೇಧಿತ ಕಾಂಗ್ರೆಪಾಕ್ ಕಮ್ಯುನಿಸ್ಟ್ ಪಕ್ಷದೊಂದಿಗೆ ಸಂಬಂಧ ಹೊಂದಿದ್ದಎನ್ನಲಾಗಿದೆ.
ಬಂಧಿತರಿಂದ ಪಿಸ್ತೂಲ್, ಮದ್ದು ಗುಂಡುಗಳು, ಸಿಮ್ ಕಾರ್ಡ್ ಮತ್ತು ಮೊಬೈಲ್ ಫೋನ್ ಗಳನ್ನು ಪಡಿಸಿಕೊಳ್ಳಲಾಗಿದೆ.