ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ಟೋಬರ್ 27 ರಂದು ದುಬೈನಿಂದ ದೆಹಲಿಗೆ ಬಂದ ಏರ್ ಇಂಡಿಯಾ ವಿಮಾನದ ಸೀಟ್ ಪಾಕೆಟ್‌ನಲ್ಲಿ ಮದ್ದುಗುಂಡು ಕಾರ್ಟ್ರಿಡ್ಜ್ ಪತ್ತೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ವಿಮಾನ ಸಿಬ್ಬಂದಿ ತಕ್ಷಣ ವಿಮಾನ ನಿಲ್ದಾಣ ಪೊಲೀಸರಿಗೆ ದೂರು ನೀಡಿ ಸುರಕ್ಷತಾ ನಿಯಮಗಳನ್ನು ಪಾಲಿಸಿದ್ದಾರೆ. ಕಾರ್ಟ್ರಿಡ್ಜ್ ಬಂದೂಕುಗಳಲ್ಲಿ ಬಳಸುವ ಮದ್ದುಗುಂಡುಗಳಾಗಿವೆ. ಅಂತಹ ವಸ್ತುಗಳನ್ನು ವಿಮಾನದಲ್ಲಿ ನಿಷೇಧಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಇತ್ತೀಚೆಗೆ ವಿಮಾನಗಳಿಗೆ ಸುಳ್ಳು ಬಾಂಬ್ ಬೆದರಿಕೆಗಳು ಹೆಚ್ಚಾಗುತ್ತಿವೆ. ಈ ಘಟನೆ ಇದೀಗ ಆತಂಕಕ್ಕೆ ಕಾರಣವಾಗಿದೆ.