ಮಾಡುವ ವಿಧಾನ
ಮೊದಲು ಒಂದು ಬೌಲ್ ಕಡ್ಲೆಯನ್ನು ಪುಡಿ ಮಾಡಿಕೊಳ್ಳಿ
ನಂತರ ಎರಡು ಬೌಲ್ ಅಕ್ಕಿ ಹಿಟ್ಟನ್ನು ದೊಡ್ಡ ಬಾಣಲೆಗೆ ಹಾಕಿ, ಇದಕ್ಕೆ ಕಡ್ಲೆಹಿಟ್ಟು ಮಿಕ್ಸ್ ಮಾಡಿ
ನಂತರ ಮಿಕ್ಸಿಯಲ್ಲಿ ಎರಡು ಸ್ಪೂನ್ ಕಾಯಿ, ಮೆಣಸಿನಕಾಯಿ, ಖಾರದಪುಡಿ, ಜೀರಿಗೆ ಹಾಗೂ ಕರಿಬೇವು ಹಾಕಿ ಮಿಕ್ಸಿ ಮಾಡಿ
ನಂತರ ಕಡ್ಲೆಹಿಟ್ಟಿಗೆ ಕಾದ ಎಣ್ಣೆ ಹಾಕಿ ಜೊತೆಗೆ ಮಿಕ್ಸಿ ಮಾಡಿದ ಮಿಶ್ರಣ ಹಾಕಿ
ಉಪ್ಪು, ಅಜ್ವೈನ್, ಎಳ್ಳು ಹಾಗೂ ಹಿಂಗ್ ಹಾಕಿ
ನೀರನ್ನು ಹಾಕುತ್ತಾ ಮಿಕ್ಸ್ ಮಾಡಿ
ನಂತರ ತಟ್ಟೆಗೆ ಎಣ್ಣೆ ಸವರಿ ಅದರ ಮೇಲೆ ಹಿಟ್ಟನ್ನು ದಾರದ ರೀತಿ ಮಾಡುತ್ತಾ ಹೋಗಿ
ನಿಮಗೆ ಬೇಕಾದ ಶೇಪ್ ನೀಡಿ, ಕಾದ ಎಣ್ಣೆಗೆ ಹಾಕಿ ಕರಿದರೆ ಕೋಡುಬಳೆ ರೆಡಿ