ಹೇಗೆ ಮಾಡೋದು?
ಮೊದಲು ಬಾಣಲೆಗೆ ಎಣ್ಣೆ ಹಾಕಿ, ಈರುಳ್ಳಿ, ಕ್ಯಾರೆಟ್, ಬೀಟ್ರೂಟ್ ಹಾಗೂ ಕೋಸು ಹಾಕಿ ಬಾಡಿಸಿ
ಉಪ್ಪು ಹಾಕಿ, ಮಿಕ್ಸ್ ಮಾಡಿ ನಂತರ ಖಾರದಪುಡಿ, ಸಾಂಬಾರ್ ಪುಡಿ ಹಾಗೂ ಗರಂ ಮಸಾಲಾ ಹಾಕಿ ಆಫ್ ಮಾಡಿ
ನಂತರ ಮಿಕ್ಸಿಗೆ ಈರುಳ್ಳಿ, ಟೊಮ್ಯಾಟೊ ಹಾಗೂ ಬೆಳ್ಳುಳ್ಳಿಹಾಕಿ ರುಬ್ಬಿ, ಈರುಳ್ಳಿ ಬಾಡಿಸಿ ನಂತರ ರುಬ್ಬಲು ಹಾಕಿ, ಇಲ್ಲವಾದರೆ ಹಸಿ ವಾಸನೆ ಬರುತ್ತದೆ.
ನಂತರ ಅದನ್ನು ಪ್ಯಾನ್‌ಗೆ ಹಾಕಿ ಎಣ್ಣೆ ಬಿಡುವವರೆಗೂ ಬಾಡಿಸಿ ಆಫ್ ಮಾಡಿ
ನಂತರ ಚಪಾತಿ ಹಿಟ್ಟನ್ನು ಕಲಿಸಿ ಲಟ್ಟಿಸಿ, ಇದನ್ನು ಸಣ್ಣ ರೌಂಡ್ ಮಾಡಿ
ಇದಕ್ಕೆ ತರಕಾರಿ ಸ್ಟಫ್ ಮಾಡಿ ಬೇಕಾದ ಶೇಪ್ ನೀಡಿ
ಇದನ್ನು ಹಬೆಯಲ್ಲಿ ಬೇಯಿಸಿ ಟೊಮ್ಯಾಟೊ ಚಟ್ನಿ ಜೊತೆ ಟೇಸ್ಟ್ ಮಾಡಿ
ಅಥವಾ ಟೊಮ್ಯಾಟೊ ಚಟ್ನಿಗೆ ಸ್ವಲ್ಪ ನೀರು ಹಾಕಿ, ಡಿಮ್‌ಸಮ್ ಮಿಕ್ಸ್ ಮಾಡಿ ಸವಿಯಬಹುದು..