ಸಾಮಾಗ್ರಿಗಳು
ಈರುಳ್ಳಿ
ಟೊಮ್ಯಾಟೊ
ಹಸಿಮೆಣಸು
ಎಣ್ಣೆ
ಕೊತ್ತಂಬರಿ ಸೊಪ್ಪು
ಸಬಸಿಗೆ ಸೊಪ್ಪು
ತರಕಾರಿಗಳು
ಶ್ಯಾವಿಗೆ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ
ನಂತರ ಹಸಿಮೆಣಸು ಈರುಳ್ಳಿ ಹಾಕಿ
ನಂತರ ಟೊಮ್ಯಾಟೊ ಹಾಕಿ ಬಾಡಿಸಿ
ನಂತರ ತರಕಾರಿಗಳು, ಉಪ್ಪು ಹಾಕಿ ಮಿಕ್ಸ್ ಮಾಡಿ
ನಂತರ ಸ್ವಲ್ಪ ಸಬಸಿಗೆ ಹಾಕಿ
ನಂತರ ಒಂದು ಲೋಟ ಶ್ಯಾವಿಗೆಗೆ ಎರಡು ಲೋಟ ನೀರಿನಂತೆ ನಿಮ್ಮ ಅಳತೆಗೆ ತಕ್ಕಷ್ಟು ನೀರು ಹಾಕಿ
ನಂತರ ಹುರಿದ ಶಾವಿಗೆಯನ್ನು ಹಾಕಿ ಕುದಿಸಿ ಆಫ್ ಮಾಡಿ ಪ್ಲೇಟ್ ಮುಚ್ಚಿ
ಐದು ನಿಮಿಷದ ನಂತರ ಬಿಸಿ ಬಿಸಿ ಶ್ಯಾವಿಗೆ ಉಪ್ಪಿಟ್ ಸವಿಯಿರಿ