ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪೇಂದ್ರ ನಿರ್ದೇಶನದ ಮತ್ತು ನಟಿಸಿರುವ UI ಚಿತ್ರ ಡಿಸೆಂಬರ್ 22 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಿದೆ. ಚಿತ್ರವನ್ನು ನೋಡಿದ ಜನರ ಪ್ರತಿಕ್ರಿಯೆಗಳು ಮಿಶ್ರವಾಗಿವೆ.
“UI” ಚಿತ್ರಕ್ಕಾಗಿ ಪ್ರೇಕ್ಷಕರು ಮಾತ್ರವಲ್ಲದೆ ಅನೇಕ ಚಲನಚಿತ್ರ ನಿರ್ದೇಶಕರು ಸಹ ಕಾತುರದಿಂದ ಕಾಯುತ್ತಿದ್ದರು. ಅದರಲ್ಲಿ ನಿರ್ದೇಶಕ ಆರ್.ಚಂದ್ರು ಕೂಡ ಒಬ್ಬರು.
‘ಯುಐ’ ಸಿನಿಮಾ ನೋಡಿದ ನಿರ್ದೇಶಕ ಆರ್.ಚಂದ್ರು ‘ಯುಐ’ ಚಿತ್ರದ ಬಗ್ಗೆ ಉಪೇಂದ್ರ ಅವರ ಬಗ್ಗೆ ಮಾತನಾಡಿದ್ದಾರೆ. ಬಾಲ್ಯದಿಂದಲೂ ಉಪೇಂದ್ರ ಅವರ ಅಭಿಮಾನಿಯಾಗಿದ್ದ ಚಂದ್ರು ಅವರನ್ನು ಆಧುನಿಕ ಬುದ್ಧ ಎಂದು ಕರೆದಿದ್ದಾರೆ.